Recent Posts

Monday, January 20, 2025
ಸಿನಿಮಾಸುದ್ದಿ

ತುಳುನಾಡಿನಲ್ಲಿ ಇದೀಗ ಕಟ್ಟಪ್ಪನದ್ದೆ ಕಾರುಬಾರು – ಕಹಳೆ ನ್ಯೂಸ್

ತುಳುನಾಡಿನಲ್ಲಿ ಇದೀಗ ಕಟ್ಟಪ್ಪನದ್ದೆ ಕಾರುಬಾರು. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ನಿರ್ದೇಶನದ ಕಟಪಾಡಿ ಕಟ್ಟಪ್ಪ ಮಾರ್ಚ್ 29ಕ್ಕೆ ತೆರೆ ಕಂಡಿದ್ದು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕರಾವಳಿ ಮತ್ತು ರಾಜ್ಯಾದ್ಯಂತ 200ಕ್ಕೂ ಹೆಚ್ಚಿನ ಥಿಯೇಟರ್‍ಗಳಲ್ಲಿ ಕಟಪ್ಪ ಸದ್ದು ಮಾಡುತ್ತಿದ್ದು ತುಳು ಪ್ರೇಕ್ಷಕರ ಮನಗೆದ್ದಿದೆ. ವಿದ್ಯಾರ್ಥಿಗಳು, ಯುವಕರು ಈ ಮೂವಿಗೆ ಫಿದಾ ಆಗಿದ್ದು ಚಿತ್ರಮಂದಿರಕ್ಕೆ ದೌಡಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ರಾಜೇಶ್ ಬ್ರಹ್ಮಾವರ್ ಈ ಸಿನೆಮಾದ ನಿರ್ಮಾಪಕರಾಗಿದ್ದು ಬ್ರಹ್ಮಾವರ್ ಮೂವೀಸ್ ಲಾಂಛನದಲ್ಲಿ ಅಡಿಯಲ್ಲಿ ‘ಕಟಪಾಡಿ ಕಟ್ಟಪ್ಪ’ ತೆರೆಗೆ ಕಂಡಿದೆ. ತುಳುರಂಗ ಭೂಮಿಯ ದಿಗ್ಗಜರ ದಂಡು ಚಿತ್ರದಲ್ಲಿ ಅಭಿನಯಿಸಿದ್ದು ಪ್ರಥಮ ಬಾರಿಗೆ ಉದಯ ಪೂಜಾರಿ ಬಳ್ಳಾಲ್‍ಬಾಗ್ ನಾಯಕ ನಟರಾಗಿ, ಚರೀಶ್ಮಾ ಸಾಲ್ಯನ್ ಪರಂಗಿಪೇಟೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜಯ್ ಕುಮಾರ್ ಕೊಡಿಯಾಲ್‍ಬೈಲ್ ಪಮ್ಮಿ ಕೊಡಿಯಾಲ್‍ಬೈಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ ಪಾಣಾಜೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್ ಪಾಂಡೇಶ್ವರ ಮನ ರಂಜಿಸಲಿದ್ದಾರೆ. ಒಟ್ಟಾಗಿ ಈ ಸಿನಮಾ ಒಳ್ಳೆಯ ಕಥೆ ಕಾಮೇಡಿಗಳನ್ನು ಒಳಗೊಂಡಿದ್ದು ಪ್ರೇಕ್ಷಕರಿಗೆ ಖುಷ್ ನೀಡಿದೆ.