Monday, January 20, 2025
ಸುದ್ದಿ

ಯಕ್ಷ ಸಂಭ್ರಮ 2019 ಕರೆಯೋಲೆ ಬಿಡುಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಯಕ್ಷ ಸಂಗಮ ಉಪ್ಪಿನಂಗಡಿ ಹಾಗೂ ಯಕ್ಷ ಸಂಗಮ ಉಪ್ಪಿನಂಗಡಿ ವಾಟ್ಸಾಪ್ ಬಳಗ ಅರ್ಪಿಸುವ ಯಕ್ಷ ಸಂಭ್ರಮ 2019 ಈ ಕಾರ್ಯಕ್ರಮದ ಕರೆಯೋಲೆಯನ್ನು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಯಕ್ಷ ಅಭಿಮಾನಿಗಳ ಸಮ್ಮುಖದಲ್ಲಿ ಶ್ರೀಯುತ ನ್ಯಾಯವಾದಿ ಮಹೇಶ ಕಜೆಯವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಯಕ್ಷಗಾನದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷ ಸಂಭ್ರಮ 2019 ಈ ಅದ್ಭುತ ಕಾರ್ಯಕ್ರಮ ಇದೇ ಬರುವ ತಾರೀಕು ಜೂನ್ 08 ಶನಿವಾರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ ಇದರ ಜೊತೆಗೆ ಮಕ್ಕಳ ಯಕ್ಷಗಾನ ಛಾಯಾ ಚಿತ್ರ ಪ್ರದರ್ಶನ, ಸಭಾ ಕಾರ್ಯಕ್ರಮ ಸನ್ಮಾನ ಹಾಗು ಪ್ರಸಿದ್ಧ ಕಲಾವಿದರಿಂದ ಏಕಾದಶಿ ಮಹಾತ್ಮೆ, ಸೀತಾ ಪರಿತ್ಯಾಗ, ಮಾಯಾ ಮಾರುತೇಯ, ರುಗ್ಮವತಿ ಕಲ್ಯಾಣ ಅದ್ಭುತ ಯಕ್ಷಗಾನ ಬಯಲಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಕಹಳೆ ನ್ಯೂಸ್‍ನ ಮುಖ್ಯಸ್ಥರು ಶ್ಯಾಮ ಸುದರ್ಶನ, ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಜಗದೀಶ್ ಕೆ, ಯಕ್ಷ ಸಂಗಮದ ಮುಖ್ಯಸ್ಥ ರವೀಶ ಹೆಚ್. ಟಿ, ಗಂಗಾಧರ ಟೈಲರ್, ಮತ್ತಿತ್ತರರು ಉಪಸ್ಥರಿದ್ದರು.