Monday, January 20, 2025
ಸುದ್ದಿ

ವಿವೇಕಾನಂದ ಕಾಲೇಜು ಉಪನ್ಯಾಸ ಕಾರ್ಯಕ್ರಮ: ಆತ್ಮವಿಶ್ವಾಸವೇ ಸಾಧನೆಯ ಮೊದಲ ಮೆಟ್ಟಿಲು: ಶ್ರೀಶ ಭಟ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಶ್ರದ್ಧೆ, ನಾಯಕತ್ವ ಗುಣ, ಇತರೆ ಕ್ಷೇತ್ರಗಳಲ್ಲಿನ ತಿಳುವಳಿಕೆ ಎಲ್ಲವೂ ಸಾಧನೆಯನ್ನು ಮಾಡಲು ಅತ್ಯಗತ್ಯ. ಪ್ರಸ್ತುತ ಸಾಮಾನ್ಯ ಜ್ಞಾನದ ತಿಳುವಳಿಕೆ ಹಾಗೂ ಅದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ರೀತಿ ಎಲ್ಲವೂ ಮುಂದಿನ ದಿನಗಳಲ್ಲಿ ನಮ್ಮನ್ನು ಹೊಸ ವಿಚಾರಕ್ಕೆ ತೆರೆದುಕೊಳ್ಳಲು ಸಹಕಾರಿಯಾಗಿರುತ್ತದೆ. ಅಂತೆಯೇ ಜೀವನದಲ್ಲಿ ಸಾಧನೆಯ ಗುರಿಯನ್ನು ಮುಟ್ಟಬೇಕಾದರೆ ಆತ್ಮವಿಶ್ವಾಸ ಮುಖ್ಯವಾಗಿರುತ್ತದೆ. ಇದುವೇ ಸಾಧನೆಯ ಮೊದಲ ಮೆಟ್ಟಿಲು ಎಂದು ವಿವೇಕಾನಂದ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಶ ಭಟ್ ಹೇಳಿದರು.

ಅವರು ಕಾಲೇಜಿನ ರೆಡ್ ಕ್ರಾಸ್ ಹಾಗೂ ತುಳು ಸಂಘದ ಆಶ್ರಯದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಯೊಬ್ಬರ ಜೀವನದಲ್ಲೂ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಲ್ಲಿ ಕೆಲವರು ಸೋಲನ್ನು ಮಾತ್ರ ಸ್ವೀಕರಿಸಿದರೆ, ಇನ್ನು ಕೆಲವರು ಗೆಲುವಿನ ಮೆಟ್ಟಿಲನ್ನು ತಮ್ಮ ಶ್ರಮದ ಮೂಲಕ ಕಾಣುತ್ತಾರೆ. ಆದರೆ, ಇವೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇರಬೇಕು. ಮುಖ್ಯವಾಗಿ ಧನಾತ್ಮಕ ಚಿಂತನೆಯ ಕಡೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವ ಸಮುದಾಯ ನಡೆಸುವ ಉತ್ತಮ ಆಲೋಚನೆಗಳು ಸಮಾಜದ ಬೆಳವಣಿಗೆಗೆ ಬಹಳ ಮುಖ್ಯ. ಅಂತೆಯೇ ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಮುಂದಿನ ಹೊಸ ಯೋಜನೆಗಳಿಗೆ ಸಹಕಾರಿಯಾಗುತ್ತದೆ. ಕಾಲಕ್ಕೆ ತಕ್ಕಂತೆ ನಮ್ಮ ಕ್ರೀಯಾಶಿಲತೆಯು ಬೆಳವಣಿಗೆಯಾದಂತೆ ಗೆಲುವಿನ ಮೆಟ್ಟಿಲನ್ನು ಬಹಳ ಬೇಗ ಏರಬಹುದು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕದ ಉಪಾಧ್ಯಕ್ಷೆ ನಿಧಿ, ತುಳು ಸಂಘದ ಪ್ರತಿನಿಧಿ ಉಷಾ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿ, ಉಪನ್ಯಾಸಕ ಡಾ. ವಿಷ್ಣು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.