Friday, November 15, 2024
ಸುದ್ದಿ

ಬಡವರ ಕರಾಳ ಬದುಕಿಗೆ ಆಸರೆಯಾಗುತ್ತಿರುವ: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸಂಘ – ಕಹಳೆ ನ್ಯೂಸ್

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸಂಘದ ಒಳ್ಳೆಯ ಕೆಲಸವನ್ನು ಕಂಡಂತೆ, ಸಂಘದ ಒಗ್ಗಟಿನ ಬಲದಿಂದ ಹೆಚ್ಚಿನ ಮರಾಟಿ ಸಮುದಾಯದ ಬಡ ಕುಟುಂಬಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸಂಘ ದಾರಿದೀಪ ಆಗುತ್ತಿದೆ.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸಂಘ ಪುತ್ತೂರು ಘಟಕಕ್ಕೆ ಬಂದ ಮಾಹಿತಿಯ ಪ್ರಕಾರ, ಪಾಣಾಜೆಯ ಒಂದು ಬಡಕುಟುಂಬದ ಮಾಹಿತಿ. ಕೂಡಲೇ ಎಚ್ಚೆತ್ತುಕೊಂಡ ಸಂಘ ಕುಟುಂಬದ ಬೆನ್ನು ಹತ್ತಲು ಹೋರಟಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೋಡಿ ..ಈಗಿನ ಕಾಲ ಹಣವಿದ್ದರೆ ಅವರ ಹಿಂದೆ ಹೋಗುವವರೆ ಹೆಚ್ಚಿನ ಜನರು. ನಾವು ಯಾವ ಕಾಲದಲ್ಲಿ ಇದ್ದೆವೆ ಅಂತ,
ಜಗತ್ತು ಎಷ್ಟೇ ವೇಗವಾಗಿ ಆಧುನಿಕ ಯುಗದಲ್ಲಿ ಬೆಳೆದರೂ, ನಾವು ಈಗ ಹೇಳುವಂತಹ ಕುಟುಂಬಕ್ಕೆ ಯಾವ ರಾಜಕೀಯ ಪಕ್ಷಗಳು, ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳು, ಭಾಷಣ ಮಾಡುವ ಯಾವ ವ್ಯಕ್ತಿಯು ಸಹಾಯಕ್ಕೆ ಬರಲಿಲ್ಲ.

ಪಂಚಾಯತ್ ನ ಯಾವ ವ್ಯಕ್ತಿಯೂ ಬಂದಿಲ್ಲ. ಪುತ್ತೂರಿನಲ್ಲಿ ಇನ್ನೂ ಕೆಲವು ಸಮುದಾಯದ ಸಂಘಗಳಿಗೆ ಈ ಕುಟುಂಬದ ಪಾಡು ಕಾಣದೆ ಇರುವುದು ವಿಪರ್ಯಾಸ. ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ದೇವತಡ್ಕ ಎಂಬಲ್ಲಿ ಕೃಷ್ಣ ನಾಯ್ಕ ಮತ್ತು ಅನಿತ ಅವರ ಕರಾಳ ಜೀವನದ ಬಗ್ಗೆ.

ಮನೆಯೇ ಮೊದಲ ಪಾಠ ಶಾಲೆ.!
ತರಾವಡು ಮನೆ ಎಂದು ಗುರುತಿಸಲ್ಪಡುವ ಮನೆಯೆ ದೇವಸ್ಥಾನ ಎಂಬುದು ನಮ್ಮ ಪಧ್ಧತಿ .!
ಆದರೆ ನಾವು ಈಗಿನ ಡಿಜಿಟಲ್ ಇಂಡಿಯಾ ಸ್ಮಾರ್ಟ್ ಸಿಟಿಯ ಕನಸಿನಲ್ಲಿರುವ ಭಾರತೀಯರು. ಆದರೆ ಪಾಣಾಜೆಯ ಇಂತಹ ಒಂದು ಸ್ಥಿತಿಯನ್ನು ನಾವು ಕಂಡು ಇಂತಹ ಕುಟುಂಬಕ್ಕೆ ಡಿಜಿಟಲ್ ಇಂಡಿಯಾದ ಕನಸು ಇನ್ನೂ 50 ವರ್ಷ ಕಾಯುವ ಸಮಯ ಇರಬಹುದು ಎಂದು ಮನಗಟ್ಟಿತು.

ಆ ಒಂದು ಚಿಕ್ಕ ಗೂಡಿನಂತಿರುವ ಗುಡಿಸಲು, ಶಿಥಿಲಗೊಂಡಿರುವ ಗುಡಿಸಲಿನ ಸ್ಥಿತಿ ನೋಡಿದರೆ ಮೈ ಜುಮ್ಮೆನಿಸುತ್ತದೆ. ಒಂದು ಚಿಕ್ಕ ಗೂಡಿನಂತಹ ಒಂದು ಕೊಠಡಿ ಹೊಂದಿರುವ ಕೊಳಕಾದ ಹಾಗೂ ಬಿರುಕು ಬಿಟ್ಟಿರುವ ಗೋಡೆಗಳ ಮಧ್ಯದಲ್ಲಿ ಅಲ್ಲಲ್ಲಿ ತೇಪೆ ಹಾಕಿರುವ ನೆಲಹಾಸು, ನಾಲ್ಕುಹನಿ ಬಿದ್ದರೆ ಸೋರುವ ಚಾವಣಿ, ಮದ್ದು ಡಬ್ಬಗಳ ರಾಶಿ, ಎಣ್ಣೆ ಡಬ್ಬಿಯಲ್ಲಿ ನಿರ್ಮಿಸಲ್ಪಟ್ಟ ಬಾಗಿಲು, ಬಿಸಿಲ ಬೇಗೆಯ ತಡೆಯಲು ಪ್ಲಾಸ್ಟಿಕ್ ನಿಂದ ನಿರ್ಮಿಸಿದ ಚಾವಣಿ, ಮನೆಯ ಹಿಂಬದಿಯಲ್ಲಿ ಎತ್ತರದಲ್ಲಿ ಬೆಳೆದು ನಿಂತ ಹುತ್ತ, ಶೌಚಾಲಯ ಇಲ್ಲದ, ವಿದ್ಯುತ್ ಇಲ್ಲದ ಆಧುನಿಕ ಜಗತ್ತಿನಿಂದ ಸಂಪೂರ್ಣ ಬೇರ್ಪಡಿಸಿದಾಗೆ ಇತ್ತು.

ಮನೆಯ ಹೆಂಗಸಿಗೆ ಯಾವುದೇ ಹಬ್ಬಹರಿದಿನಗಳು ಇಲ್ಲ, ಜಾತ್ರೆ ಮದುವೆ ಏನು ಇಲ್ಲ ಪ್ರಪಂಚದ ಅರಿವೆ ಇಲ್ಲದ ಸ್ಥಿತಿಯನ್ನು ಎದುರಿಸುತ್ತಿರುವ ಕತ್ತಲ ಬದುಕಿನಲ್ಲಿ ನಾಲ್ಕು ವರ್ಷದಿಂದ ಜೀವನವನ್ನು ಕಳೆಯುತ್ತಿರುವ ಒಂದು ಬಡ ಕುಟುಂಬ.

ಎಲ್ಲಾ ಪರಿಸ್ಥಿತಿಯನ್ನು ಗಮನಿಸಿದ ದ.ಕ‌ ಜಿಲ್ಲಾ ಮರಾಟಿ ಸಮಾಜ ಸಂಘ ಪುತ್ತೂರು ಘಟಕದ ಅಧ್ಯಕ್ಷರಾದ ಆಶೋಕ್ ನಾಯ್ಕ ಇವರ ನೇತೃತ್ವದ ಯುವಕರ ತಂಡ ಮನೆಯ ಯಜಮಾನನ್ನು ಕಳೆದ ವಾರ 24 ನೇ ಆದಿತ್ಯವಾರ 2019 ರಂದು ಭೇಟಿ ಮಾಡಿ ಸಮಸ್ಯೆಗಳನ್ನು ಸಂಗ್ರಹಿಸಿ, ಮುಂದೆ ನಿಮ್ಮ ‌ಜೊತೆ ಸಂಘ ಇದೆ ಎಂದು ಮಾತು ಕೊಟ್ಟ ಸಂಘ ಕೆಲಸವನ್ನು ಪ್ರಾರಂಭಿಸಿತು.

ಈಗ ಭರವಸೆಯಂತೆ ಸಂಘ ಶ್ರಮದಾನದ ಮೂಲಕ ಮನೆಯ ಒಳಗೆ ಮಳೆಯ ನೀರು ಸೋರದಂತೆ, ಸಿಮೆಂಟು ಶೀಟಿನ ಮೇಲ್ಛಾವಣಿಯನ್ನು ಮತ್ತು ಮನೆಯ ಮುಂದಿನ ಬಾಗಿಲು ಹೊಸತನ್ನು ನಿರ್ಮಿಸಿ ಸುಮಾರು 20000/-(ಇಪ್ಪತ್ತು ಸಾವಿರ ರೂಪಾಯಿ)ಖರ್ಚು ಮಾಡಿ ಮನೆಯನ್ನು ಸ್ವಚ್ಛಗೊಳಿಸಿದೆ. ಇಂದು ಸಮಾಜದಲ್ಲಿ ಉತ್ತಮ ಕೆಲಸ ಮಾಡಿ ತೋರಿಸಿರುವುದು ಕುಟುಂಬದ ಮತ್ತು ಸಮಾಜಕ್ಕೆ ಮೆಚ್ಚುಗೆಗೆ ಪಾತ್ರವಾಗಿದೆ.