Friday, November 15, 2024
ಸುದ್ದಿ

ಸೋಮವಾರದಿಂದ ಹೊಸ ನಿಯಮ: ಮದ್ಯದ ಬಾಟಲಿ ಮೇಲೆ ಎಚ್ಚರಿಕೆ ಸಂದೇಶ – ಕಹಳೆ ನ್ಯೂಸ್

ಸಿಗರೇಟ್ ಪ್ಯಾಕ್ ಮೇಲೆ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆಯಲಾಗುತ್ತದೆ. ಇನ್ಮುಂದೆ ಮದ್ಯದ ಬಾಟಲಿ ಮೇಲೆ ಕೂಡ ಎಚ್ಚರಿಕೆ ಸಂದೇಶ ನೀಡುವುದು ಅನಿವಾರ್ಯ. ಸೋಮವಾರದಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. ಮದ್ಯ ಆರೋಗ್ಯಕ್ಕೆ ಹಾನಿಕರ ಎಂದು ಬರೆಯಬೇಕು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಎಲ್ಲ ಮದ್ಯದ ಬಾಟಲಿ ಮೇಲೂ ಎಚ್ಚರಿಕೆ ಸಂದೇಶವಿರಬೇಕೆಂದು ಸೂಚನೆ ನೀಡಿದೆ. ಜೊತೆಗೆ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡಬೇಡಿ ಎಂದು ಬರೆಯುವಂತೆ ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಗ್ಲೀಷ್ ಭಾಷೆಯಲ್ಲಿ ಎಚ್ಚರಿಕೆ ಸಂದೇಶವಿರುತ್ತದೆ. ಒಂದು ವೇಳೆ ರಾಜ್ಯ ಸರ್ಕಾರಗಳು ತಮ್ಮ ಭಾಷೆಯಲ್ಲಿ ಎಚ್ಚರಿಕೆ ಸಂದೇಶವಿರಲಿ ಎಂದು ಬಯಸಿದ್ರೆ ಅದೇ ಭಾಷೆಯಲ್ಲಿರಲಿದೆ. ಇಂಗ್ಲೀಷ್ ನಲ್ಲಿ ಸಂದೇಶ ನೀಡುವ ಅವಶ್ಯಕತೆಯಿರುವುದಿಲ್ಲ. ಎಲ್ಲ ಕಂಪನಿಗಳಿಗೆ ಎಫ್‌ಎಸ್‌ಎಸ್‌ಎಐ 6 ತಿಂಗಳ ಅವಕಾಶ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು