Recent Posts

Friday, November 15, 2024
ಸುದ್ದಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಕಂತಿನ 2 ಸಾವಿರ ರೂ. ರೈತರ ಖಾತೆಗೆ – ಕಹಳೆ ನ್ಯೂಸ್

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಕಂತಿನ ಹಣ ರೈತರಿಗೆ ಇದೇ ವಾರ ಸಿಗಲಿದೆ. ಎರಡನೇ ಕಂತಿನ 2 ಸಾವಿರ ರೂಪಾಯಿ ರೈತರ ಖಾತೆ ಸೇರಲಿದೆ. ಒಂದು ಕೋಟಿಗೂ ಹೆಚ್ಚು ರೈತರು ಈಗಾಗಲೇ ಮೊದಲ ಕಂತಿನ ಹಣವನ್ನು ಪಡೆದಿದ್ದು, ಎರಡನೇ ಕಂತಿನ ಹಣ ಈ ವಾರಾಂತ್ಯದಲ್ಲಿ ರೈತರಿಗೆ ಸಿಗಲಿದೆ.

ಈ ಬಾರಿಯ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಘೋಷಣೆ ಮಾಡಲಾಗಿತ್ತು. 2 ಹೆಕ್ಟರ್ ಗಿಂತ ಕಡಿಮೆ ಕೃಷಿ ಭೂಮಿಯಿರುವ ರೈತರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ಸಿಗಲಿದೆ. ಅಧಿಕಾರಿಗಳ ಪ್ರಕಾರ 3 ಕೋಟಿ ರೈತರಿಗೆ ಮೊದಲ ಕಂತಿನ ಹಣ ಸಿಕ್ಕಿದೆಯಂತೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಹೆಸರು ನೋಂದಾಯಿಸಿರುವ ರೈತರಿಗೆ ಮೊದಲ ಕಂತಿನ ಹಣ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ಗಢ ರಾಜ್ಯಗಳು ರೈತರ ಹೆಸರನ್ನು ಕಳುಹಿಸಿಲ್ಲ. ಪಶ್ಚಿಮ ಬಂಗಾಳ ಸರ್ಕಾರ ಕೂಡ ರೈತರ ಹೆಸರಿನ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿಲ್ಲ. ಇದ್ರಿಂದ ಕೋಟ್ಯಾಂತರ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು