Recent Posts

Monday, January 20, 2025
ಸುದ್ದಿ

ಮೀನುಗಾರಿಕಾ ಬೋಟ್ ಜಖಂ – ಕಹಳೆ ನ್ಯೂಸ್

ದಿನಾಂಕ 29-03-2019 ರಂದು ಸುರತ್ಕಲ್ ಬಳಿ ಒಗಿ MV Chenaya Naree  ಎಂಬ ಶಿಪ್ಪಿಗೆ ಮೀನುಗಾರಿಕಾ ಬೋಟ್ ತಾಗಿರುವ ಬಗ್ಗೆ ಕೋಸ್ಟ್ ಗಾರ್ಡ್ ನಿಂದ ಕರಾವಳಿ ಕಾವಲು ಪಡೆಗೆ ಮಾಹಿತಿ ಬಂದಿದ್ದು, ಅದರಂತೆ ಕರಾವಳಿ ಕಾವಲು ಪೊಲೀಸ್ ಠಾಣಾ ಮಂಗಳೂರು ಠಾಣೆಯವರು ಈ ಬಗ್ಗೆ ವಿಚಾರಿಸಿದಾಗ ದಿನಾಂಕ 31-03-2019 ರಂದು ಬೆಂಗ್ರೆ ಸಮೀಪ ಜಖಂಗೊಂಡಿರುವ ಮೀನುಗಾರಿಕಾ ಬೋಟ್ ಕಂಡು ಬಂದಿದ್ದು, ಈ ಬೋಟ್ ಜಲ ಪದ್ಮಾವತಿ-II, ರಿಜಿಸ್ಟ್ರೇಷನ್ ನಂಬ್ರ IND-KA-01MM-3712ನೇಯದ್ದು ಆಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ರಿ ಮೀನುಗಾರಿಕಾ ಬೋಟ್ ದಿನಾಂಕ 29-03-2019 ರಂದು ರಾತ್ರಿ ಮಧ್ಯದಲ್ಲಿ ನವಮಂಗಳೂರು ಬಂದರು ಬ್ರೇಕ್ ವಾಟರ್ ನಿಂದ ಸುಮಾರು 20 ಮೈಲ್ ಸಮುದ್ರ ದೂರದಲ್ಲಿ ಸಿಂಗಾಪೂರ್ ದೇಶಕ್ಕೆ ಸೇರಿದ  MV Chenaya Naree ಎಂಬ ಶಿಪ್ಪಿಗೆ ಡಿಕ್ಕಿ ಹೊಡೆದಿರುವುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ರಿ ಶಿಪ್ ಸಿಂಗಾಪೂರ್‌ನಿಂದ ಕೊಲಾಂಬೋಗೆ ಹೊರಟಿರುವ ಸರಕು ಸಾಗಾಣಿಕೆ ಶಿಪ್ ಆಗಿತ್ತು. ಅದೃಷ್ಟವಶಾತ್ 9 ಜನ ಮೀನುಗಾರರು ಅಪಾಯದಿಂದ ಪಾರಾಗಿದ್ದು, ಬೋಟ್‌ಗೆ ತುಂಬಾ ನಷ್ಟಯುಂಟಾಗಿರುತ್ತದೆ. ಈ ಮೀನುಗಾರಿಕಾ ಬೋಟ್ ಬೆಂಗ್ರೆ ನಿವಾಸಿ ಶ್ರೀ ಶ್ರೀನಿವಾಸ್ ಸಾಲ್ಯಾನ್ ರವರಿಗೆ ಸೇರಿರುವುದಾಗಿರುತ್ತದೆ.

ಈ ರೀತಿ ಸಮುದ್ರದಲ್ಲಿ ಅನಾಹುತಗಳು ಆಗದಂತೆ ಎಲ್ಲಾ ಮೀನುಗಾರಿಕಾ ಬೋಟ್ ಗಳು  AIS (Automatic Identification System)  ಅಳವಡಿಸಿಕೊಳ್ಳಬೇಕು ಹಾಗೂ ಬೋಟ್‌ನ ಎರಡೂ ಬದಿಗೆ ನ್ಯಾವಿಗೇಶನ್ ಲೈಟ್ ಅಳವಡಿಸಿಕೊಳ್ಳುವುದು. ತುರ್ತು ಸಂಧರ್ಭದಲ್ಲಿ ಸಿ.ಎಸ್.ಪಿ ಕಂಟ್ರೋಲ್ ರೂಂ 1093 ನೇಯದಕ್ಕೆ ಕರೆ ಮಾಡಬಹುದಾಗಿದೆ ಎಂದು ಈ ಹಿನ್ನೆಲೆಯಲ್ಲಿ ಎಸ್.ಪಿ, ಸಿ.ಎಸ್.ಪಿ ಮಲ್ಪೆರವರು ತಿಳಿಸಿರುತ್ತಾರೆ.