Recent Posts

Monday, January 20, 2025
ಸುದ್ದಿ

ಅಕ್ರಮ ಸಮುದ್ರದ ಹವಳಗಳ ಪತ್ತೆ, ಓರ್ವನ ಬಂಧನ – ಕಹಳೆ ನ್ಯೂಸ್

ಬಂಟ್ವಾಳ: ಅಕ್ರಮವಾಗಿ ಹವಳ ಮಾರಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಸುಮಾರು ಐದು ಲಕ್ಷ ಮೌಲ್ಯದ ಹವಳಗಳನ್ನು ಮಂಗಳೂರು ವಿಶೇಷ ಪೋಲೀಸ್ ಅರಣ್ಯ ಸಂಚಾರಿ ದಳದ ಪೋಲೀಸರು ಸ್ವಾಧೀನಪಡಿಸಿದ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹರಪ್ಪನ ತಾಲೂಕಿನ ಕಡತಿ ಹೋಬಳಿ ಖಂಡಕೇರಿ ತಾಂಡ ನಿವಾಸಿ ದಿ.ರಾಮ ನಾಯ್ಕ ಅವರ ಮಗ ಜಯಸಿಂಗ್ ಇ. (29) ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಚಿಕ್ಕಮಂಗಳೂರು ಜಿಲ್ಲೆಯ ಇಂದಿರಾ ಗಾಂಧಿ ರಸ್ತೆಯ ಬೋಳರಾಮೇಶ್ವರ ದೇವಸ್ಥಾನದ ಹತ್ತಿರದ ಬ್ಲೂ ಪರ್ಲ್ ಹೋಟೆಲ್‍ನ 5 ನೇ ಅಂತಸ್ತಿನ ದಾಲ್ಚಿನ್ನಿ ರೆಸ್ಟೋರೆಂಟ್‍ನ ಅಕ್ರಮವಾಗಿ ಸಮುದ್ರದ ತಳ ಭಾಗದಲ್ಲಿರುವ ವನ್ಯ ಜೀವಿ ಸಮುದ್ರದ ಹವಳಗಳನ್ನು ಇಟ್ಟಿರುವುದನ್ನು ಪತ್ತೆ ಮಾಡಿ ಸುಮಾರು ಐದು ಲಕ್ಷ ಮೌಲ್ಯದ ಸಮುದ್ರದ ಹವಳಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿ ಜಯಸಿಂಗ್‍ಯನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಮತ್ತು ಸೊತ್ತುಗಳನ್ನು ಮುಂದಿನ ತನಿಖೆಯ ಬಗ್ಗೆ ಆರ್.ಎಫ್.ಒ. ಚಿಕ್ಕಮಂಗಳೂರು ವಲಯರವರಿಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪ್ರಭಾಕರ ಬಾರ್ಕಿರವರ ಆದೇಶದಂತೆ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸು ಉಪ ನಿರೀಕ್ಷಕರಾದ ಮಾಧವ ಕೂಡ್ಲು ಹಾಗು ಸಿಬ್ಬಂದಿಗಳಾದ ಜಗನ್ನಾಥ ಶೆಟ್ಟಿ, ಪ್ರವೀಣ, ಉದಯ ನಾಯ್ಕ ಎನ್, ಮಹೇಶ, ದೇವರಾಜ್ ಹಾಗೂ ಸುಂದರ ಶೆಟ್ಟಿ ರವರು ಪಾಲ್ಗೊಂಡಿರುತ್ತಾರೆ.