Sunday, January 19, 2025
ಸುದ್ದಿ

ರಾಜ್ಯಕ್ಕೆ ಮಾದರಿ ATM ತಯಾರಿಸಿದ ಶಾಲಾ ಶಿಕ್ಷಕ ಶಿವು ಯಾದವಾಡರಿಗೆ ಸನ್ಮಾನ – ಕಹಳೆ ನ್ಯೂಸ್

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಎಸ್.ಎಸ್.ಖಾನಗೌಡ್ರ ತೋಟ ಹಿಪ್ಪರಗಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವು ಯಾದವಾಡ ಗುರುಗಳು ಶಾಲೆಯ ಮಕ್ಕಳಿಗೆ ಹಾಗೂ ಗ್ರಾಮದ ಜನರಿಗೆ ಮಾದರಿಯಾದಂತಹ ATM ತಯಾರಿಸಿ ಶಿಕ್ಷಣ ಇಲಾಖೆಗೆ ಹಾಗೂ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ATM ಕುರಿತು ಖಾನಗೌಡ್ರ ಶಾಲೆಯ ಮಕ್ಕಳು ವಿವರಣೆ ನೀಡುತ್ತಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೆ ಶಾಲೆಯ ನಾಲ್ಕು ಮತ್ತು ಐದನೇ ತರಗತಿಯ ಕೊಠಡಿಗಳು ಪಾಠೋಪಕರಣಗಳಿಂದ ಕಂಗೊಳಿಸುತ್ತಿದ್ದು ಕಿಟಕಿ ಬಾಗಿಲುಗಳು ಕಾಣದಂತಾಗಿವೆ. ಜೊತೆಗೆ ಇಲ್ಲಿಯ ವಿದ್ಯಾರ್ಥಿಗಳ ಜ್ಞಾನಮಟ್ಟ ಎಲ್ಲರನ್ನೂ ಮೀರಿಸುವಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ನುಗ್ಗಿಯವರು ಶಿವು ಯಾದವಾಡರವರು ತಯಾರಿಸಿದ ATM ನೋಡಿ ನಿಜವಾದ ಪಬ್ಲಿಕ್ ಹೀರೋ ಶಿವು ಯಾದವಾಡ ಎಂದು ಮೆಚ್ವುಗೆ ವ್ಯಕ್ತಪಡಿಸಿ ನಂತರ ಮಾತನಾಡಿದ ಚಂದ್ರು ನುಗ್ಗಿಯವರು ಈ ATM ಅನ್ನು ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರದರ್ಶನ ಮಾಡಬೇಕೆಂದು ತಿಳಿಸಿದರು.

ಈ ಸಮಯದಲ್ಲಿ ಶಾಲೆಯ SDMC ಅಧ್ಯಕ್ಷರಾದ ಸಿದ್ದನಗೌಡ ಖಾನಗೌಡ್ರ ಅವರು ರಾಜ್ಯ ಪ್ರದಾನ ಕಾರ್ಯದರ್ಶಿಗಳಿಗೆ ಸನ್ಮಾನ ಮಾಡಿದರು.

ಮಾದರಿ ATM ತಯಾರಿಸಿದ ಶಿಕ್ಷಕ ಶಿವು ಯಾದವಾಡ ಇವರಿಗೆ  DDPI ನೇತೃತ್ವದಲ್ಲಿ ರಾಜ್ಯದ ಪ್ರಧಾನ ಕಾರ್ಯದರ್ಶಿಗಳು ಕುಲಹಳ್ಳಿ ಶಾಲೆಯಲ್ಲಿ ಅದ್ದೂರಿ ಸನ್ಮಾನ ಮಾಡಿದರು.

ಈ ಸಮಯದಲ್ಲಿ DDPI ಸಾಹೆಬ್ರು, ಕುಲಹಳ್ಳಿ ಶಾಲೆಯ ಶಿಕ್ಷಕ ವೃಂದದವರು, ಜಿಲ್ಲಾ ಅಧ್ಯಕ್ಷರು ಹಾಗೂ ಹಿರಿಯರು ಗಣ್ಯರು ಉಪಸ್ಥಿತರಿದ್ದರು.