ಕಳೆದ ಮಾರ್ಚ್ 25 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತ್ತೊಟ್ಟು ಎಂಬಲ್ಲಿ ಲಾರಿ ಚಾಲಕನ ಬಾಯಿಗೆ ಬಟ್ಟೆ ತುರುಕಿ ಕೈ ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸ್ ತನಿಖಾ ತಂಡ ಮಹತ್ವದ ಯಶಸ್ಸು ಸಾಧಿಸಿ ದರೋಡೆ ಪ್ರಕರಣದ ಸತ್ಯಾಂಶ ಬಯಲಿಗೆಳೆದಿದೆ.
ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಸ್ವತಃ ಲಾರಿ ಚಾಲಕನೇ ಮಾಡಿದ ದರೋಡೆ ನಾಟಕ ಎನ್ನುವುದು ಪತ್ತೆ ಯಾಗಿದೆ. ಒಂದು ಲಕ್ಷಕ್ಕೂ ಮಿಕ್ಕಿದ ಸೊತ್ತುಗಳನ್ನು ತಾನೇ ಕದ್ದು ಬಳಿಕ ತಾನೇ ತನ್ನ ಕೈ ಕಾಲುಗಳನ್ನು ಕಟ್ಟಿ ಹಾಕಿದಂತೆ ಮಾಡಿ ದರೋಡೆಕೋರರ ಕೃತ್ಯವೆಂದು ಬಿಂಬಿಸಿದ ಮಂಡ್ಯ ಪಾಂಡವಪುರದ ನಿವಾಸಿ ಅಂಬರೀಶನನ್ನು ಉಪ್ಪಿನಂಗಡಿ ಪೊಲೀಸ್ ತಂಡ ಬಂಧಿಸಿದೆ.
ಪ್ರೊಬೆಷನರಿ ಎ.ಎಸ್ಪಿ ಪ್ರದೀಪ್ ಗುಂಟಿ, ಸಿ.ಐ ಮಂಜುನಾಥ್, ಎಸ್.ಐ ನಂದಕುಮಾರ್, ಪ್ರೊಬೆಷನರಿ ಎಸ್.ಐ ಪವನ್ ನಾಯಕ್, ಎ.ಎಸ್.ಐ ರುಕ್ಮಯ. ಸಿಬ್ಬಂದಿಗಳಾದ ಹರೀಶ್ಚಂದ್ರ .ಇರ್ಷಾದ್. ಜಗದೀಶ್ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.