Recent Posts

Sunday, January 19, 2025
ರಾಜಕೀಯಸುದ್ದಿ

ಮಹತ್ವಾಕಾಂಕ್ಷೆಯ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್‌ : ವೇದಿಕೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ಸೋನಿಯಾ ಗಾಂಧಿ – ಕಹಳೆ ನ್ಯೂಸ್

ನವದೆಹಲಿ: ಕಾಂಗ್ರೆಸ್‌ ಪಕ್ಷ ಮಂಗಳವಾರ ಭಾರೀ ಮಹತ್ವಾಕಾಂಕ್ಷೆಯ ಪ್ರಣಾಳಿಕೆ ಬಿಡುಗಡೆ ಮಾಡಿತಾದರೂ, ಪ್ರಣಾಳಿಕೆಯ ಮುಖಪುಟ ವಿನ್ಯಾಸದ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೇದಿಕೆಯ ಮೇಲೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪ್ರಣಾಳಿಕೆ ಬಿಡುಗಡೆಗೂ ಮುನ್ನ ಸೋನಿಯಾ ಗಾಂಧಿ ಅವರು ಪ್ರಣಾಳಿಕೆ ಉಸ್ತುವಾರಿ ಹೊತ್ತಿದ್ದರು ಎನ್ನಲಾದ ಕರ್ನಾಟಕದ ಸಂಸದ, ಎಐಸಿಸಿ ಸಂಶೋಧನಾ ಘಟಕದ ಮುಖ್ಯಸ್ಥ ಪ್ರೊ. ರಾಜೀವ್‌ ಗೌಡ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಟೀವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಪ್ರಣಾಳಿಕೆಯ ಮುಖಪುಟದಲ್ಲಿ ಬರೀ ಜನರು ಕಾಣುವ ಚಿತ್ರವನ್ನು ಹಾಕಿದ್ದು, ಅದರ ಕೆಳಭಾಗದಲ್ಲಿ ಸಣ್ಣದಾಗಿ ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪಕ್ಷದ ಚಿಹ್ನೆ ಹಸ್ತ ಚಿಹ್ನೆ ಮುದ್ರಿಸಿದ್ದೀರಿ. ಕಾಣುವಂತೆ ದೊಡ್ಡದಾಗಿ ಮುದ್ರಿಸಬೇಕಿತ್ತಲ್ಲವೇ?’ ಎಂದು ಸೋನಿಯಾ ಅವರು ರಾಜೀವ್‌ರನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋನಿಯಾ ಅವರು ಕೋಪದಿಂದ ‘ಕೈ’ ತೋರಿಸುತ್ತ ರಾಜೀವ್‌ರತ್ತ ಪ್ರಶ್ನಿಸಿದಾಗ ಅವರು ಏನೋ ಸಮಜಾಯಿಷಿ ನೀಡುತ್ತಿರುವುದು ಕಂಡುಬಂತು. ಬಳಿಕ ಸಮಾರಂಭದುದ್ದಕ್ಕೂ ಸೋನಿಯಾ ಗರಂ ಆಗಿದ್ದರು ಎಂದು ಮೂಲಗಳು ಹೇಳಿವೆ. ಬಳಿಕ ಅವರು ಭಾಷಣ ಮಾಡದೇ ಹೊರಟು ಹೋದರು.