Saturday, September 21, 2024
ಸುದ್ದಿ

ಎರಡೂ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮತ್ತು ಭ್ರಷ್ಟಚಾರಕ್ಕೆ ‘ಮೈತ್ರಿ’ : ಶೋಭಾ ಕರಂದ್ಲಾಜೆ – ಕಹಳೆ ನ್ಯೂಸ್

ಕಡೂರು – ರಾಜ್ಯದಲ್ಲಿ ಕಳೆದ 10 ತಿಂಗಳಿನಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೊಂದಾಣಿಕೆಯಿಂದ ಸರ್ಕಾರ ನಡೆಸುತ್ತಿದ್ದು, ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮತ್ತು ಭ್ರಷ್ಟಚಾರಕ್ಕೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ತಾಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರದ ಪ್ರಾರಂಭದಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಲು ಪೈಪೋಟಿ ನಡೆಸಿ ಎರಡೂ ಪಕ್ಷಗಳಲ್ಲಿ ಒಮ್ಮತವಿಲ್ಲದೆ ಸರ್ಕಾರದಲ್ಲಿ ಯಾವುದೇ ಕಾರ್ಯಗಳು ನಡೆದಿರುವುದಿಲ್ಲ. ಇದೊಂದು ಡೊಂಗಿ ಮೈತ್ರಿಯಾಗಿದೆ ಎಂದು ಟೀಕಿಸಿದರು. ಈ ರಾಜ್ಯ ಸರ್ಕಾರವನ್ನು ಯಾರೂ ಕೆಡವಬೇಕಿಲ್ಲ. ತಾನಾಗಿಯೇ ಬೀಳಲಿದೆ.

ಜಾಹೀರಾತು

ಈ ಸರ್ಕಾರಕ್ಕೆ ಭವಿಷ್ಯವಿಲ್ಲ. ಇವರಿಗೆ ಬರಗಾಲದ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಕೋಟ್ಯಾಂತರರೂ ಅನುದಾನ ವಾಪಸ್ ಆಗಿದೆ ಎಂದರು.

ಜಿಲ್ಲೆಯಲ್ಲಿ ಅಭಿವೃದ್ದಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ರೈಲ್ವೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ತರಲಾಗಿದೆ. ಕಾಫಿ ಮತ್ತು ಅಡಿಕೆ ಬೆಳೆಗಳ ಸಮಸ್ಯೆ ಇದೆ.

ಇದರ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಅಡಿಕೆ ನಿಷೇಧದ ಬಗ್ಗೆ ಪ್ರಧಾನ ಮಂತ್ರಿಯವರೇ ಆಸಕ್ತಿ ವಹಿಸಿದ್ದಾರೆ. ದೇಶದ ಅಭಿವೃದ್ದಿಗೆ ಮತ್ತೊಮ್ಮೆ ಬಿಜೆಪಿ ಈ ದೇಶಕ್ಕೆ ಬೇಕಿದೆ ಎಂಬುದು ಜನಾಭಿಪ್ರಾಯವಾಗಿದೆ ಎಂದರು.