Sunday, November 24, 2024
ಸುದ್ದಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಎರಡನೆ ಕಂತಿನ ಹಣ 24 ಗಂಟೆಯಲ್ಲಿ ರೈತರ ಖಾತೆಗೆ – ಕಹಳೆ ನ್ಯೂಸ್

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಎರಡನೆ ಕಂತಿನ ಹಣ ಇನ್ನೂ ರೈತರ ಖಾತೆ ಸೇರಿಲ್ಲ. ಆದ್ರೆ ಇನ್ನು 24 ಗಂಟೆಯಲ್ಲಿ ರೈತರ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸಿಇಒ ವಿವೇಕ್ ಅಗ್ರವಾಲ್ ಈ ವಿಷ್ಯವನ್ನು ಹೇಳಿದ್ದಾರೆ.

ಏಪ್ರಿಲ್ 5ರಿಂದ ರೈತರ ಖಾತೆಗೆ 2 ಸಾವಿರ ಜಮಾ ಆಗಲಿದೆ ಎಂದವರು ಹೇಳಿದ್ದಾರೆ. ಏಪ್ರಿಲ್ 1ರಂದೇ ರೈತರ ಖಾತೆಗೆ ಹಣ ಸೇರಲಿದೆ ಎನ್ನಲಾಗಿತ್ತು. ಅ ಪ್ರಕಾರ, ಮಾರ್ಚ್ 31ರವರೆಗೆ 3 ಕೋಟಿ 27 ಸಾವಿರ ರೈತರಿಗೆ ಮೊದಲ ಹಂತದ ಹಣ ನೀಡಲಾಗಿದೆ. 4.76 ಕೋಟಿ ರೈತರು ಹೆಸ್ರು ನೋಂದಾಯಿಸಿದ್ದಾರೆ. ಮೊದಲ ಕಂತಿನ ಹಣ ಸಿಗದ ರೈತರಿಗೆ ಒಂದೇ ಬಾರಿ ಎರಡೂ ಕಂತಿನ ಹಣ ಹೋಗಲಿದೆ ಎಂದು ಅಗ್ರವಾಲ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಘೋಷಣೆ ಮಾಡಿತ್ತು. ನೀತಿ ಸಂಹಿತೆ ಜಾರಿಯಿರುವ ಕಾರಣ ರೈತರಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೇಳಿತ್ತು. ನೀತಿ ಸಂಹಿತೆ ಜಾರಿಗೆ ಮುನ್ನ ಹೆಸರು ನೋಂದಾಯಿಸಿದ ರೈತರಿಗೆ ಮಾತ್ರ ಎರಡನೇ ಕಂತಿನ ಹಣ ನೀಡಬಹುದೆಂದು ಆಯೋಗ ಹೇಳಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು