Sunday, January 19, 2025
ಸುದ್ದಿ

ಧರ್ಮಸಂಸತ್‌ನಲ್ಲಿ ರಾಮಮಂದಿರ ನಿರ್ಮಾಣ ನಿರ್ಣಯ – ತೊಗಾಡಿಯಾ

ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವನ್ನು ಧರ್ಮಸಂಸತ್ತಿನಲ್ಲೇ ನಿರ್ಧರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ.

ಧರ್ಮಸಂಸತ್ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್ತಿನಲ್ಲಿ ಅಸ್ಪೃಶ್ಯತೆ, ಗೋ ರಕ್ಷಣೆ, ಗೋ ರಕ್ಷಣೆ ಕುರಿತ ಕಾನೂನು ಚರ್ಚೆಯಾಗಲಿದೆ. ರೈತರಿಗೆ ಪೂರಕ ಯೋಜನೆ ಕುರಿತ ವಿಷಯವೂ ಚರ್ಚೆ ನಡೆಯಲಿದೆ. ರಾಮ ಮಂದಿರ ನಿರ್ಮಾಣ ವಿಚಾರದ ಕುರಿತೂ ಚರ್ಚೆ ನಡೆಯಲಿದೆ. ಪದ್ಮಾವತಿ ಸಿನಿಮಾ ವಿವಾದದ ಕುರಿತು ಮಾತನಾಡಿದ ಅವರು, ಪದ್ಮಾವತಿ ಚಿತ್ರ ಬ್ಯಾನ್ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಗೋ ಹತ್ಯೆ ನಿಷೇಧ ವಿಷಯದ ಕುರಿತು ಧರ್ಮಸಂಸತ್ತಿನಲ್ಲೇ ವಿಚಾರ ಮಂಡನೆಯಾಗಲಿದೆ ಎಂದು ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response