Saturday, November 23, 2024
ಸುದ್ದಿ

ಹೋಟೆಲ್ ವೊಂದರ ಪಾರ್ಟಿಯಲ್ಲಿ ಬಳಸಿದ ಸಂಗೀತದ ಶಬ್ದದಿಂದಾಗಿ ಮೊಸಳೆ ಸಾವು – ಕಹಳೆ ನ್ಯೂಸ್

ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ಪಾರ್ಟಿಯಲ್ಲಿ ಬಳಸಿದ ಸಂಗೀತದ ಶಬ್ದದಿಂದಾಗಿ ಪಕ್ಕದ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಕ್ಯೂಬನ್ ಮೊಸಳೆ ಸಾವು ಕಂಡಿದೆ.

ಚೆನ್ನೈನ ಈಸ್ಟ್ ಕೋರ್ಸ್ ರಸ್ತೆಯಲ್ಲಿರುವ ಶೆರಟಾನ್ ಗ್ರ್ಯಾಂಡ್ ಚೆನ್ನೈ ರೆಸಾರ್ಟ್ ಅಂಡ್ ಸ್ಪಾ ಹೋಟೆಲ್ ನಲ್ಲಿ ಮಾ.30 ರಂದು ಭರ್ಜರಿ ಪಾರ್ಟಿಯೊಂದನ್ನ ಏರ್ಪಡಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾರ್ಟಿಯಲ್ಲಿ ಬಳಸಲಾದ ದೊಡ್ಡ ದೊಡ್ಡ ಸ್ಪೀಕರ್ ನಿಂದ ಹೊರಹೊಮ್ಮುತ್ತಿದ್ದ ಶಬ್ದದಿಂದಾಗಿ ಹೋಟೆಲ್ ನ ಕಾಂಪೌಂಡ್ ನಿಂದ 50 ಹೆಜ್ಜೆ ದೂರದಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲಿದ್ದ 12 ವಯಸ್ಸಿನ ಹೆಣ್ಣು ಮೊಸಳೆ ಸಾವನ್ನಪ್ಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಸಳೆಗೆ ಸಂಗೀತದ ಶಬ್ದದಿಂದಾಗಿ ಕಿರಿಕಿರಿ ಉಂಟಾಗಿದ್ದು, ಕರ್ಕಷ ಶಬ್ದಕ್ಕೆ ಮೊಸಳೆಯ ದೇಹ ಕಂಪಿಸಲು ಆರಂಭಿಸಿದೆ. ಈ ಕಾರಣಕ್ಕಾಗಿ ಮೊಸಳೆ ಸಾವನ್ನಪ್ಪಿದೆ ಎನ್ನಲಾಗಿದೆ.

ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಕೇಂದ್ರವು ಸಹ ಈ ಕ್ಯೂಬನ್ ಮೊಸಳೆ ಸಂತತಿ ಅಳಿವಿನ ಅಂಚಿನಲ್ಲಿದೆ ಎಂದು ವರದಿ ಮಾಡಿದೆ. ಇದರ ಸಂರಕ್ಷಣೆಯೂ ಅನಿವಾರ್ಯವೆಂದಿದೆ.

ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಇದೇ ಹೋಟೆಲ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಿಂದಾಗಿ ಪ್ರಾಣಿ ಸಂಗ್ರಹಾಲಯದಲ್ಲಿ ಮೊಸಳೆಗಳು ಪರಸ್ಪರ ಬಡಿದಾಡಿಕೊಂಡಿತ್ತು. ಕಾರಣ ಅದೇ ಕರ್ಕಷ ಶಬ್ದದಿಂದಾಗಿ ಆಗ ಹೋಟೆಲ್ ನ ಆಡಳಿತ ಮಂಡಳಿ ಮೊಸಳೆಗಳ ಸಂರಕ್ಷಣೆಗಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ ಅದು ಈಡೇರಿಸದ ಕಾರಣ ಈಗ ಪ್ರಾಣಿಸಂಗ್ರಹಾಲಯದ ಜಾಗವನ್ನೇ ಬೇರೆಡೆ ಸ್ಥಳಾಂತರಿಸಲು ಯೋಚಿಸಲಾಗುತ್ತಿದೆ.