Sunday, January 19, 2025
ಅಂಕಣ

‘ ಶ್ರೀ ಮಹಾಮಹಿಮ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 31

ಶ್ರೀ ಮಹಾಮಹಿಮ ಗುರುವರ್ಯರು ರಾಘವೇಶ್ವರ ಶ್ರೀಶರು|
ರಾಮಹನುಮರ ನಿತ್ಯ ಪೂಜಿಪ ವಾರಿಧಿಯ ದಿವ್ಯಾತ್ಮರು||
ಲೋಕವನು ಅನುದಿನವು ಬೆಳಗುವ ಗುರುಕೃಪಾಂಕರು ಶರಣರು|
ಸಾಮರಸ್ಯದೊಳಿಂದು ಕಾಯಲಿ ನಮ್ಮ ನಿಷ್ಠೆ ದಯ ಕರುಣರು||೧||

ಗುರುಶರಣ ಪ್ರಿಯ ವಿಶಾರದ ಗೌರವಾನ್ವಿತ ಪದತಲ|
ರವಿಕಿರಣ ಪರವಿಶಾರದ ಮೌನವಂದಿತ ಸದುಮಲ||
ಒಳ್ಳೆ ಬುಧ್ಧಿಯ ನೀತಿ ಸತ್ಯದ‌ ಪ್ರೀತಿ ಸಹನೆಯ ಭೋಧಿಸಿ|
ರನ್ನ ರತುನದ ಕಂದಭಕ್ತರ ಧರ್ಮರಥದಲಿ ನಲಿಯಿಸಿ||೨||

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುಗಳ ಭಕುತಿಯ ಸುಲಭ|
ನಮ್ಮೀ ಜನಪ್ರಿಯ ಗುರುತೇಜ||
ಇವರದು ವಿಧವಿಧ ರೂಪ|
ಇವರೇ ಭಕುತರ ದಾರಿದೀಪ ||೩||

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುಗಳು ಬಂದರೆ ಭಯವಿಲ್ಲ|
ಗುರುಗಳ ಕರುಣೆಗೆ ಎಣೆಯಿಲ್ಲ||
ಗುರುಗಳ ಪೂಜೆಯ ಪ್ರತಿಫಲ|
ಬೆಳಗುವದೆಂದು ಬಾಳೆಲ್ಲ ||೪||

ಗುರುಗಳ ಮಹಿಮೆ ಏನೆಂದು|
ಬಣ್ಣಿಸಲಾಗದು ಎಂದೆಂದು||
ಪಾದಕೆ ಪೂಜೆಯ ಸಲ್ಲಿಸಲಿಂದು|
ಸಲ್ಲಿಸೆ ಹರಸುವ ಗುರುಕೃಪರಿಂದು||೫||

ಅಯ್ಯೋ ಅಯ್ಯೋ ಎನ್ನದಿರಿ|
ಎಚ್ಚರ ತಪ್ಪಿ ಎಡವದಿರಿ||
ನಾಸ್ತಿಕರಾಗಿ ಬದುಕದಿರಿ|
ನಮಿಸಿ ಗುರುಗಳ ನಗುತಲಿರಿ||೬||

Leave a Response