ಬಂಟ್ವಾಳದ ಮಂಚಿಯಲ್ಲಿ ತಂದೆಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ದಾವೂದ್ ಪಾಣೆಮಂಗಳೂರು ಅತ್ಯಾಚಾರ ವೆಸಗಿದ ಆರೋಪಿ. ಈತನ ಬಂಧನಕ್ಕೆ ಗ್ರಾಮಾಂತರ ಪೋಲೀಸರು ಬಲೆಬೀಸಿದ್ದಾರೆ. ಈತನಿಗೆ ನಾಲ್ಕು ಮದುವೆಯಾಗಿದ್ದು, ಒಟ್ಟು 15 ಮಕ್ಕಳಿದ್ದಾರೆ. ಈತ ಒಟ್ಟು ಮೂರು ಬಾರಿ ಅತ್ಯಾಚಾರ ಮಾಡಿದ್ದಾನೆ. ಮೆಲ್ಕಾರ್ ಹೋಟೇಲೊಂದರ ಲಾಡ್ಜ್ ಸೇರಿದಂತೆ ಮನೆಯಲ್ಲಿ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆ ಹುಡುಗಿಯ ಅಕ್ಕನ ಗಂಡ (ಬಾವ) ಕೂಡ ಅತ್ಯಾಚಾರ ಮಾಡಿದ್ದಾನೆ. ಇನ್ನು ಸಂತ್ರಸ್ತೆ ಯುವತಿ ಟೈಲರ್ ಕೆಲಸ ಮಾಡುತ್ತಿದ್ದಾಳೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ಒಂದು ವಾರದ ಹಿಂದೆ ದಾಖಲಾಗಿರುತ್ತದೆ. ಈ ವಿಚಾರಣೆ ವೇಳೆ ಹುಡುಗಿ ತಂದೆ ಕೂಡಾ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಯಿಬಿಟ್ಟಿದ್ದಾಳೆ.