Saturday, November 23, 2024
ಸುದ್ದಿ

ಕಾಂಗ್ರೇಸ್ ವಿರುದ್ಧ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾದ ಆರ್. ಅಶೋಕ್ ಗರಂ – ಕಹಳೆ ನ್ಯೂಸ್

ಮಂಗಳೂರು : 13 ರಂದು ಸಂಜೆ 3 ಗಂಟೆಗೆ ಮಂಗಳೂರಿಗೆ ಮೋದಿ ಆಗಮಿಸಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಮೋದಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಮಂಗಳೂರಿನಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾದ ಆರ್. ಅಶೋಕ್ ಹೇಳಿದರು. ಇದೇ ಸಂದರ್ಭದಲ್ಲಿ ಮಾತಾನಾಡಿದ ಇವರು ರಾಜ್ಯದಲ್ಲಿ ಈಗಾಗಲೇ ಮೋದಿ ಹವಾ ಇದೆ. ರಾಜ್ಯದ ಸಮಿಶ್ರ ಸರಕಾರ ಅಪನಂಬಿಕೆ, ಒಳಜಗಳದ ಬೇಗುದಿಯಲ್ಲಿ ಇದೆ.

ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್‍ನ್ನು ಸೋಲಿಸಲು ಪಣ ತೊಟ್ಟಿದೆ. ದೇಶದ ಭದ್ರತೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮೋದಿಯನ್ನು ಬೆಂಬಲಿಸುತ್ತಾರೆ. ಅಪವಿತ್ರ ಮೈತ್ರಿ ಎಂಬುವುದು ಈಗಾಗಲೇ ಸಾಬೀತಾಗಿದೆ. ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಆಯಸ್ಸು ಇಲ್ಲ ಎಂಬ ಮಾತು ಮೈತ್ರಿ ಪಕ್ಷದಿಂದಲೇ ಕೇಳಿ ಬರುತ್ತಿದೆ. ಸಿಎಂ ಮಾತಿನಲ್ಲಿ ಹಿಡಿತವಿಲ್ಲ, ಸೋಲಿನ ಭಯ ಕಾಡುತ್ತಿದೆ. ಸಿಎಂ ಕುಮಾರಸ್ವಾಮಿ ಪುಲ್ವಾಮಾ ಬಗ್ಗೆ ಹೇಳಿಕೆ ನೀಡ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜನ ಸೈನಿಕರನ್ನು ನಂಬಬೇಕೋ ನಿಮ್ಮನು ನಂಬಬೇಕೋ..? ಸೈನಿಕರು ಯಾವತ್ತು ದೇಶದ ಗೌಪ್ಯತೆ ಬಗ್ಗೆ ಬಿಟ್ಟು ಕೊಡುವುದಿಲ್ಲ. ಸಿಎಂ ಸೈನಿಕರಿಗೆ ಅಪಮಾನ ಮಾಡಿದ್ದಾರೆ, ಅವರಿಗೆ ಜನ ಬುದ್ದಿ ಕಳುಹಿಸುತ್ತಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ದ್ರೋಹದ ಕೇಸ್‍ನ್ನು ವಾಪಾಸು ಪಡೆಯುತ್ತೇವೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಣಾಳಿಕೆಯಿಂದ ಅವರ ಯಾರ ಪರ ಎಂಬುದು ಗೊತ್ತಾಗುತ್ತದೆ ಕಾಂಗ್ರೆಸ್ ಡ್ರಾಮಾ ಕಂಪನಿ, ಯಕ್ಷಗಾನ ಮಾಡುತ್ತಾರೆ ಮಂಡ್ಯದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಈಗಾಗಲೇ ಪ್ರಚಾರಕ್ಕೆ ಹೋಗಿದ್ದಾರೆ. ಒಂಟಿ ಹೆಣ್ಣು ಮಗಳ ವಿರುದ್ಧ ಕೌರವರ ತಂಡ ಯುದ್ಧ ಸಾರಿದೆ. ಯಾವತ್ತಿದ್ದರು ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ ಎಂದರು.