Recent Posts

Sunday, January 19, 2025
ಸುದ್ದಿ

ಯುಗಾದಿಗೆ ಶುಭ ಹಾರೈಸಿದ ನರೇಂದ್ರ ಮೋದಿ – ಕಹಳೆ ನ್ಯೂಸ್

ಯುಗಾದಿ ಹಬ್ಬದ ಹೊಸ್ತಿಲಿಲ್ಲಿ ನಾವಿದ್ದೆವೆ, 2019ರಲ್ಲಿ ವಿಕಾರಿ ನಾಮ ಸಂವತ್ಸರದ ಆರಂಭವಿದು. ಅನೇಕ ಹಬ್ಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭ ಹಾರೈಸುತ್ತಾ ಬಂದಿದ್ದಾರೆ. ಅಂತೆಯೇ ಇಂದು ಯುಗಾದಿಯ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಹೊಸ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮಲ್ಲ ಕನಸುಗಳು ನನಸಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆಲ್ಲ ಸಂತೋಷ ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂದು ನಾನು ಆಶಿಸುತ್ತೇನೆ’- ಎಂದವರು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟೇ ಅಲ್ಲ, ಇತರ ಪ್ರಾದೇಶಿಕ ಭಾಷೆಗಳಲ್ಲೂ ಸಹ ಅವರು ಆಯಾ ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಮೋದಿ ಕನ್ನಡದಲ್ಲಿ ಶುಭ ಕೋರುತ್ತಿರುವುದು ಇದೇ ಮೊದಲಲ್ಲ. ಕನ್ನಡ ರಾಜ್ಯೋತ್ಸವ, ಸಂಕ್ರಾಂತಿ ಸೇರಿದಂತೆ ಅನೇಕ ಬಾರಿ ಅವರು ಕನ್ನಡದಲ್ಲಿ ಹಾರೈಸಿದ್ದಾರೆ.