Recent Posts

Sunday, January 19, 2025
ಸುದ್ದಿ

ಯಾರಿಗಾದ್ರು ಮೈತ್ರಿ ಒಪ್ಪಿಗೆ ಇಲ್ಲಾಂದ್ರೆ ಪಕ್ಷದಿಂದ ಹೊರ ಹೋಗಬಹುದು : ಸಿದ್ದರಾಮಯ್ಯ – ಕಹಳೆ ನ್ಯೂಸ್

ಬೆಂಗಳೂರು/ಮಂಡ್ಯ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರಿಂದ ರಾಷ್ಟ್ರೀಯ ಹಾಗೂ ಕೆಳಹಂತದವರೆಗೂ ಮೈತ್ರಿಯಾಗಿದೆ. ಯಾರಿಗಾದ್ರು ಮೈತ್ರಿ ಒಪ್ಪಿಗೆ ಇಲ್ಲಾಂದ್ರೆ ಪಕ್ಷದಿಂದ ಹೊರ ಹೋಗಬಹುದು ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೈತ್ರಿಗೆ ತಮ್ಮ ಒಪ್ಪಿಗೆ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಮಂಡ್ಯದಲ್ಲಿ ಚಲುವರಾಯ ಸ್ವಾಮಿ ಕೂಡಾ ಮೈತ್ರಿ ತಮ್ಮ ಒಪ್ಪಿಗೆ ಇಲ್ಲಾ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಪರೋಕ್ಷವಾಗಿ ಈ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿದೆ.ಹೀಗಾಗಿ ಎಲ್ಲರೂ ಮೈತ್ರಿ ಧರ್ಮವನ್ನು ಪಾಲಿಸಬೇಕು. ಇಲ್ಲಾಂದ್ರೆ ಪಕ್ಷ ಬಿಟ್ಟು ಹೋಗಬಹುದು ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಅಗತ್ಯ ಸಿಎಂಗೆ ಇಲ್ಲ, ಮೈತ್ರಿಗೆ ಒಪ್ಪಿಗೆ ಇಲ್ಲ: ಚಲುವರಾಯ ಸ್ವಾಮಿ

ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪುತ್ರ ನಿಖಿಲ್ ಅಭ್ಯರ್ಥಿ ಎಂದು ಘೋಷಿಸುವಾಗಲೂ ನಮ್ಮನ್ನು ಕೇಳಿಲ್ಲ. ನನ್ನ ಅವಶ್ಯಕತೆ ಸಿಎಂಗೆ ಇಲ್ಲ. ಹೀಗಾಗಿ ಅವರು ಮಾತನಾಡಲ್ಲ. ನಾನು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಿಲ್ಲ. ಆದರೆ ಮೈತ್ರಿಗೆ ತಮ್ಮ ಒಪ್ಪಿಗೆ ಇಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದ್ದಾರೆ.