ನವದೆಹಲಿ : ಶ್ರೀರಾಮಚಂದ್ರ ನೆಲೆಸಿದ ಅಯೋಧ್ಯೆಯಲ್ಲಿ ಒಂದು ಮಹಾನ್ ಚಮತ್ಕಾರ ನಡೆದಿದೆ. ಮರ್ಯಾದಾ ಪುರುಷೋತ್ತಮ ಕಾಲಿಟ್ಟ ನೆಲದಲ್ಲಿ ಇತಿಹಾಸವೇ ಬೆರಗಾಗುವಂಥಾ ಪವಾಡ ನಡೆದಿದೆ. ಅದು ಅಂತಿಂಥಾ ಪವಾಡವಲ್ಲ. ಯಾರೂ ಊಹಹಿಸದಂಥಾ ಮಹಾ ಪವಾಡ ಅದು.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರ ಚರ್ಚೆ ನಡೆಯುತ್ತಿತ್ತು. ಇಡೀ ದೇಶಾದ್ಯಂತ ಈಗ ರಾಮಮಂದಿರ ನಿರ್ಮಾಣದ್ದೇ ಸದ್ದು. ರಾಮಮಂದಿರ ಆಗಲೇಬೇಕು ಅನ್ನೋದೇ ಚರ್ಚೆ. ಪರ ವಿರೋಧಗಳ ನಡುವೇನೂ ಮಂದಿರ ನಿರ್ಮಾಣಕ್ಕೆ ಬೇಕಾದ ತಯಾರಿ ನಡೀತಾ ಇದೆ. ಇಂಥಾ ಟೈಮಲ್ಲೇ ನೋಡಿ, ರಾಮಭಕ್ತ ಹನುಮಂತ ಅಯೋಧ್ಯೆಯಲ್ಲಿ ಚಮತ್ಕಾರವನ್ನ ಸೃಷ್ಟಿಸಿದ್ದು, ಮಂದಿರ ನಿರ್ಮಾಣದ ಸಾರಥಿಯಾಗಿ ಅಯೋಧ್ಯೆಗೆ ಕಾಲಿಟ್ಟಿದ್ದಾನೆ ಅಂಥ ಹೇಳಲಾಗುತ್ತಿದೆ. ಇದು ನಿಜಕ್ಕೂ ಶುಭಶಕುನವಾಗಿದ್ದು. ಮಂದಿರ ನಿರ್ಮಾಣ ಆಗೇ ಆಗುತ್ತೆ ಅಂತ ಹೇಳ್ತಾ ಇದ್ದಾರೆ ಕೋಟಿ ಕೋಟಿ ಭಕ್ತರು.
ಯಾವ್ಯಾವ ಕಾಲಕ್ಕೆ ಏನೇನು ಆಗಬೇಕೋ ಅದು ಆಗೇ ಆಗುತ್ತೆ ಅನ್ನೋದು ಎಲ್ಲರ ನಂಬಿಕೆ. ಈಗ ಮಂದಿರ ನಿರ್ಮಾಣದ ಸನ್ನಿವೇಷಗಳು ಗೋಚರಿಸ್ತಾ ಇದ್ದು, ಎಲ್ಲವೂ ರಾಮನ ಇಚ್ಛೆಯಂತೆ ನಡೀತಾ ಇದೆ ಅಂಥ ಹೇಳಲಾಗುತ್ತಿದೆ. ಇದರ ನಡುವಲ್ಲೇ ರಾಮಧೂತ ಆಂಜನೇಯ ಮಂದಿರ ನಿರ್ಮಾಣದ ಚರ್ಚೆ ಟೈಮಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಆಶೀರ್ವದಿಸಿ ರಾಮನ ಮುಂದೆ ಜಪಕ್ಕೆ ಕುಳಿತಿದ್ದು ಶುಭಸೂಚಕದ ಸಂಕೇತ ಅಂತ ಹೇಳಲಾಗುತ್ತಿದೆ. ಇನ್ನು ಇದೇ ಡಿಸೆಂಬರ್ 6 ಕ್ಕೆ ಶಿಯಾ ವಕ್ಫ್ಬೋರ್ಡ್ ಜೊತೆ ಅಂತಿಮ ಮಾತುಕಥೆ ಇದೆ. ಅದು ಸಕ್ಸಸ್ ಆದರೆ ಮಂದಿರ ನಿರ್ಮಾಣ ಕೆಲಸ ತುಂಬಾನೇ ಸಲೀಸಾಗುತ್ತೆ. ಅದನ್ನ ಸಲೀಸು ಮಾಡೋದಕ್ಕೆ ಅಂತಲೇ ಅಯೋಧ್ಯೆಗೆ ಆಗಮಿಸಿದ್ದಾನೆ ರಾಮಧೂತ ಹನುಮಂತ.