Sunday, January 19, 2025
ಸುದ್ದಿ

ಮಂಡ್ಯದಲ್ಲಿ ಯಾರು ಗೆಲ್ಲಬೇಕೆಂದು ಜನರೇ ತೀರ್ಮಾನಿಸುತ್ತಾರೆ: ಸಿಎಂಗೆ ಚೆಲುವರಾಯಸ್ವಾಮಿ ತಿರುಗೇಟು – ಕಹಳೆ ನ್ಯೂಸ್

ಬೆಂಗಳೂರು: ಮಂಡ್ಯದಲ್ಲಿ ಯಾರು ಗೆಲ್ಲಬೇಕೆಂದು ಜನರೇ ತೀರ್ಮಾನಿಸುತ್ತಾರೆ. ಜನರ ತೀರ್ಪಿಗೆ ನಾವು ಬದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಇತಿಮಿತಿಯೊಳಗೆ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈ ಎಲೆಕ್ಷನ್ ನಲ್ಲಿ ಶಿವರಾಮೇಗೌಡರ ಪರವಾಗಿ ಪ್ರಚಾರ ಮಾಡಿದ್ದೆವು. ಗೆಲುವಿನ ಬಳಿಕ ನಮ್ಮನ್ನು ಗೌರವದಿಂದ ಮಾತನಾಡಿಸಿಲ್ಲ. ಸಿ.ಎಸ್. ಪುಟ್ಟರಾಜು ನನಗೆ ಬಹಿರಂಗವಾಗಿಯೇ ಅವಮಾನ ಮಾಡಿದ್ದರು. ಮಾಜಿ ಶಾಸಕ ನರೇಂದ್ರಸ್ವಾಮಿಗೆ ಗೌರವ ತೋರಿದ್ದರು. ಆದರೂ ನಾವು ಸುಮ್ಮನಿದ್ದೇವೆ. ಇದನ್ನು ಯಾರೂ ಕೇಳಿಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ದರ್ಶನ್-ಯಶ್ ಪ್ರಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದಾಗ ಅನೇಕ ಕಲಾವಿದರು ಪ್ರಚಾರ ನಡೆಸಿದ್ದರು. ಈಗ ತಮ್ಮ ವಿರುದ್ಧ ಹೋಗುತ್ತಿರುವುದಕ್ಕೆ ಸೂಕ್ತವಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ದರ್ಶನ್ ಮತ್ತು ಯಶ್ ಅಂಬರೀಶ್ ಜೊ:ತೆಯಲ್ಲಿ ಬೆಳೆದ ಹುಡುಗರು. ಅಂಬರೀಶ್ ಇದ್ದಾಗಲೂ ಪ್ರಚಾರಕ್ಕೆ ಹೋಗಿದ್ದರು. ಈಗ ಸುಮಲತಾ ಅವರಿಂದ ದೂರ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಿಖಿಲ್ ಕುಮಾರ್ ಮಂಡ್ಯ ಅಭ್ಯರ್ಥಿ ಎಂದು ಅವರೇ ನಿರ್ಧರಿಸಿದ್ದರು. ಯಾರೂ ನಮ್ಮನ್ನು ಈ ಬಗ್ಗೆ ಕೇಳಿಲ್ಲ. ಹೀಗಿರುವಾಗ ನಾವೇನು ಮಾಡುವುದಕ್ಕೆ ಆಗುತ್ತದೆ. ನಾವಂತೂ ಸುಮಲತಾ ಪರವಾಗಿ ಪ್ರಚಾರ ಮಾಡಿಲ್ಲ. ಹೀಗಿದ್ದರೂ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ. ಯಾರ ಬೆನ್ನಿಗೆ ಚೂರಿ ಹಾಕಿದ್ದೇವೆ ಎಂದು ಸಿಎಂ ಹೇಳಲಿ ಎಂದು ತಿಳಿಸಿದ್ದಾರೆ.