Recent Posts

Sunday, January 19, 2025
ರಾಜಕೀಯಸುದ್ದಿ

ಮಂಡ್ಯದಲ್ಲಿ ಸುಮಲತಾ ಅಭಿಮಾನಿಗಳ ಮುಂದೆ ಅತ್ತದ್ದು ಯಾಕೆ ಗೊತ್ತಾ..? – ಕಹಳೆ ನ್ಯೂಸ್

ಮಂಡ್ಯ : ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಯುಗಾದಿ ದಿನವೂ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಈ ಬಾರಿ ಹಬ್ಬ ಆಚರಿಸಬಾರದು ಅಂದುಕೊಂಡಿದ್ದೆ. ನಿಮ್ಮ ಪ್ರೀತಿಗೆ ಇನ್ನು ಮುಂದೆ ಇಲ್ಲಿಯೇ ಹಬ್ಬ ಆಚರಿಸಬೇಕೆಂದುಕೊಂಡಿದ್ದೇನೆ ಎಂದು ಹೇಳುತ್ತಲೇ ಅವರು ಕಣ್ಣೀರಿಟ್ಟಿದ್ದು, ಅಭಿಮಾನಿಗಳು ಸಮಾಧಾನಪಡಿಸಿದ್ದಾರೆ.

ಬೆಳಗ್ಗೆಯಿಂದ ರಾತ್ರಿಯವರೆಗೂ ಸುಮಾರು ೨೮ ಹಳ್ಳಿಗಳಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದ್ದಾರೆ. ದೊಡ್ಡಗರುಡನಹಳ್ಳಿ ಬೀರಪ್ಪಸ್ವಾಮಿ ದೇವಾಲಯದ ಬಳಿ ಪ್ರಚಾರ ನಡೆಸುವಾಗ, ಅಂಬರೀಶ್ ನೆನೆದು ಕಣ್ಣೀರಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಳುತ್ತಲೇ ಮಾತನಾಡಿದ ಅವರು, ಹಬ್ಬವೇ ಬೇಡ ಅಂದುಕೊಂಡಿದ್ದೇನೆ. ನಾನು ಅಳುವುದಿಲ್ಲ. ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಹೇಳುತ್ತಲೇ ಕಣ್ಣೀರು ಹಾಕಿದ್ದಾರೆ. ಆಗ ಬೆಂಬಲಿಗರು, ಅಭಿಮಾನಿಗಳು ಅಳಬೇಡಿ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು