Friday, September 20, 2024
ಸುದ್ದಿ

ಭಾರತಕ್ಕೆ ಬರಲಿದೆ ಮಾತನ್ನು ಕೇಳುವ ಕಾರು – ಕಹಳೆ ನ್ಯೂಸ್

ತಂತ್ರಜ್ಞಾನ ಮುಂದುವರಿದಂತೆ ಮನುಷ್ಯನ ಕೆಲಸ ಕೂಡ ಮತ್ತಷ್ಟು ಸುಲಭಗೊಳುತ್ತಾ ಹೋಗುತ್ತೆ. ನಮಗಿಷ್ಟವಾದ ಹಾಡುಗಳನ್ನು ಕೇಳಬೇಕೆಂದರೆ ಅಮೇಝಾನ್ ಸಿದ್ಧಪಡಿಸಿರುವ ‘ಅಲೆಕ್ಸಾ’ ಇದೆ. ಇನ್ನು ಮೊಬೈಲ್‍ನಲ್ಲಿ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಲು ಸಿರಿ, ಗೂಗಲ್‍ಗಳಿವೆ ಇವುಗಳಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಾರುಗಳನ್ನು ಚಲಾಯಿಸುವಾಗ ಚಾಲಕನ ಕಾರ್ಯವನ್ನು ಸಲೀಸಾಗಿ ಮಾಡಲು ಇದೀಗ ಇಂಗ್ಲೆಂಡ್ ಮೂಲದ ‘ಎಂಜಿ’ ಮೋಟಾರ್ಸ್ ಕಾರು ಕಂಪೆನಿ ನೆಕ್ಷ್ಟ್ ಜನರೇಷನ್ ಕಾರುಗಳನ್ನು ಸಿದ್ಧಪಡಿಸುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಎಸ್‍ಯುವಿ ಕಾರು ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಕಾರ್ಯ ನಿರ್ವಹಿಸಲಿದೆ. ಈ ಕಾರಿನಲ್ಲಿ ಕುಳಿತು ನಮ್ಮ ಧ್ವನಿಯ ಮೂಲಕ ‘ಹೆಲೋ ಎಂಜಿ’ ಎಂದು ಉದ್ಘರಿಸಿ ಹಿಂದಿನ ಸೀಟಿನ ಗಾಜನ್ನು ಏರಿಸು, ಏಸಿ ಕಡಿಮೆ ಮಾಡು, ಮಳೆ ಬರಲು ಆರಂಭವಾದಾಗ ವೈಪರ್ ಓನ್ ಮಾಡು ಎಂಬಿತ್ಯಾದಿ ಕೆಲಸಗಳನ್ನು ಕ್ಷಣಾರ್ಧದಲ್ಲೇ ಮಾಡುತ್ತದೆ.

ಜಾಹೀರಾತು

ಇವಲ್ಲದೆ ಟೈರ್ ಪಂಕ್ಚರ್ ಆಗಿದೆಯೇ ದಾರಿಯ ಮುಂದಕ್ಕೆ ಟ್ರಾಫಿಕ್ ಜಾಮ್ ಇದೆಯೇ, ಈ ದಾರಿಯಲ್ಲಿ ಸಮೀಪ ಇರುವ ಆಸ್ಪತ್ರೆ-ಹೊಟೇಲ್‍ಗಳ ಬಗ್ಗೆ ಮಾಹಿತಿಯನ್ನು ಕೂಡ ನಿಖರವಾಗಿ ‘ಎಂಜಿ ಐ ಸ್ಮಾರ್ಟ್ ಆ್ಯಪ್’ ಮೂಲಕ ನೀಡುತ್ತದೆ.

ಇನ್ನೂ ಈ ಕಾರಿನ ದೊಡ್ಡ ಉಪಯೋಗವೆಂದರೆ ದಟ್ಟಾರಣ್ಯ ಮಧ್ಯದಲ್ಲಿಯೂ ನೆಟ್‍ವರ್ಕ್ ಸಿಗುತ್ತೆ, ಕಾರಣ ಈ ಕಾರಿನಲ್ಲಿ 5ಜಿ ನೆಟ್‍ವರ್ಕ್ ಇರಲಿದೆ. ಈ ಕಾರು ಮುಂಬರುವ ಜೂನ್ ತಿಂಗಳಿನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.