Recent Posts

Tuesday, November 19, 2024
ಸುದ್ದಿ

ಉಡುಪಿಯ ಧರ್ಮಸಂಸದ್ ಕಾರ್ಯಕ್ರಮಕ್ಕೆ ಪುತೂರು ಜಿಲ್ಲೆಯಿಂದ 25 ಸಾವಿರ ಮಂದಿ | ಮುರಳಿಕೃಷ್ಣ ಹಸಂತ್ತಡ್ಕ ಪತ್ರಿಕಾ ಗೋಷ್ಠಿ

 

ಪುತ್ತೂರು: ವಿಶ್ವಹಿಂದೂ ಪರಿಷತ್, ಬಜರಂಗದಳದ. ವತಿಯಿಂದ ಉಡುಪಿಯಲ್ಲಿ ನ.24 ರಿಂದ ನಡೆಯಲಿರುವ ಧರ್ಮಸಂಸದ್ ಕಾರ್ಯಕ್ರಮಕ್ಕೆ ಪುತ್ತೂರು ಜಿಲ್ಲೆಯಿಂದ ಸುಮಾರು 25ಸಾವಿರ ಮಂದಿ ಹಿಂದೂ ಬಾಂಧವರು ತೆರಳಲಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳಿ ಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬಯಿ ಪೊವ್ರಾಯ ಸಾಂದೀಪನಿ ಸಾಧನಾಲಯದಲ್ಲಿ 1964ರ ಆಗಸ್ಟ್ 29 ,ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ವಿಶ್ವ ಹಿಂದೂ ಪರಿಷದ್ ಜನ್ಮತಾಳಿತು.1984 ಎಪ್ರಿಲ್ 7, 8 ರಂದು ಹೊಸದಿಲ್ಲಿಯಲ್ಲಿ ಮೊದಲ ಧರ್ಮಸಂಸದ್ ಅಧಿವೇಶನ ನಡೆಯಿತು.ಅಂದಿನಿಂದ ಇದುವರೆಗೆ 14 ಧರ್ಮಸಂಸದ್ ಅಧಿವೇಶನಗಳು ನಡೆದಿವೆ.ಎರಡನೆ ಧರ್ಮಸಂಸದ್ 1985 ರಲ್ಲಿ ಉಡುಪಿಯಲ್ಲಿ ನಡೆದರೆ ಈಗ 15 ನೇ ಧರ್ಮಸಂಸದ್ ಮತ್ತೆ ಉಡುಪಿಯಲ್ಲಿ ನಡೆಯುತ್ತಿದೆ ಎಂದ ಅವರು ಇದೊಂದು ಐತಿಹಾಸಿಕ ಘಟನೆಯಾಗಿರುವುದರಿಂದ ಪ್ರತಿಯೊಂದು ಮನೆಯಿಂದ ಹಿಂದುಗಳು ಭಾಗವಹಿಸಬೇಕು. ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಹಿಂದುಗಳೆಲ್ಲರೂ ಜಾತಿ ಮತ ಭೇಧ ಇಲ್ಲದೇ ಈ ಸಮ್ಮೇಳನಕ್ಕೆ ಆಗಮಿಸುವಂತೆ ಅವರು ವಿನಂತಿಸಿದರು.
ನ.24 ರಂದು ಹಿರಿಯ ಸಾಧು ಸಂತರಾದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಧರ್ಮಸಂಸದ್ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ. ಸರಸಂಘಚಾಲಕ ಮೋಹನ್ ಜಿ ಭಾಗವತ್, ಬಾಬಾ ರಾಮದೇವ್,ರವಿಶಂಕರ್ ಗುರೂಜಿಯಿಂದ ಹಿಡಿದು ದೇಶದ ಮೂಲೆ ಮೂಲೆಯಿಂದ ಸಾಧುಗಳು ಆಗಮಸಲಿದ್ದು,ದ.ಕ ಜಿಲ್ಲೆಯ. ಎಲ್ಲಾ ಸ್ವಾಮೀಜಿಯವರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್,ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ತಾಲೂಕು ಸಹ ಸಂಚಾಲಕ ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.

Leave a Response