Recent Posts

Monday, January 20, 2025
ಸಿನಿಮಾಸುದ್ದಿ

ಬಾಲಿವುಡ್‍ಗೆ ಕಿರಿಕ್ ಪಾರ್ಟಿ – ಕಹಳೆ ನ್ಯೂಸ್

ಮುಂಬೈ: 2016 ರಲ್ಲಿ ಕಮಾಲ್ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ಇದೀಗ ಬಾಲಿವುಡ್ ನಲ್ಲಿ ಸದ್ದು ಮಾಡಲು ರೆಡಿಯಾಗಿದೆ.

ಕಿರಿಕ್ ಪಾರ್ಟಿ ನಿಜಕ್ಕೂ ಒಂದು ಅದ್ಬುದ್ಬುತ ಚಿತ್ರ ಅಂತಾ ಅನೇಕ ಮಂದಿ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಹೀಗೆಯೂ ಒಂದು ಸಿನಿಮಾ ಮಾಡಬಹುದು ಎಂದು ಅಂದುಕೊಂಡಂತ ಚಿತ್ರ. ಅದೆಷ್ಟೋ ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇದೀಗ ಬಾಲಿವುಡ್ ಗೆ ಕಾಲಿಟ್ಟಿದೆ. ಈ ಚಿತ್ರ ಹಿಂದಿಯಲ್ಲಿ ಈ ಚಿತ್ರ ರೀಮೇಕ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಿವುಡ್‍ಗೆ ರೀಮೇಕ್
ಇಂದಿಗೂ ಕಿರಿಕ್ ಪಾರ್ಟಿ ಸದ್ದು ಮಾಡುತ್ತಲೇ ಇದೆ. ಯಾಕಂದರೆ ಆ ಸಿನಿಮಾ ಹಾಡುಗಳು ಎವರ್ ಗ್ರೀನ್ ಹಾಡುಗಳಾಗಿವೆ. ಈ ಸಿನಿಮಾ ಮೂಲಕ ಚಿರಪರಿಚಿತರಾದ ನಟಿ ರಶ್ಮಿಕಾ ಇದೀಗ ಉನ್ನತ ಮಟ್ಟದ ನಟಿಯಾಗಿ ಮಿಂಚುತ್ತಿದ್ದಾರೆ. ಈ ಸಿನಿಮಾ ಅನೇಕ ಹೊಸಬರನ್ನು ಹುಟ್ಟುಹಾಕಿದ ಸಿನಿಮಾ. ಇಂಥಹ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದ ಈ ಚಿತ್ರ ಇದೀಗ ರೀಮೇಕ್ ಆಗುತ್ತಿರುವುದು ಖುಷಿಯ ಸಂಗತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ಣನ ಪಾತ್ರದಲ್ಲಿ ಕಾರ್ತಿಕ್ ಆರ್ಯನ್
ಕಿರಿಕ್ ಪಾರ್ಟಿ ಚಿತ್ರ ರೀಮೇಕ್ ಆಗುತ್ತಿದೆ. ಕರ್ಣನ ಪಾತ್ರಕ್ಕೆ ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಾರೆ ಎನ್ನಲಾಗಿದೆ. ಇನ್ನು ಈ ಚಿತ್ರವನ್ನು ಹಿಂದಿಯಲ್ಲಿ ಅಭಿಷೇಕ್ ಜೈನ್ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. ಸದ್ಯ ಈ ಚಿತ್ರದ ಕಥೆಯಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಸ್ಥಾನ ಕಾಯ್ದುಕೊಂಡಿರುವ ನಟ ಕಾರ್ತಿಕ್ ಆರ್ಯನ್ ನಟಿಸುತ್ತಿರಿವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಸದ್ಯ ಜಾಕ್ವೆಲಿನ್ ಫನಾರ್ಂಡೀಸ್ ನಾಯಕಿಯಾಗಿ ಕಾಣಿಸಲಿದ್ದಾರಂತೆ.