Recent Posts

Wednesday, November 20, 2024
ಸುದ್ದಿ

ಭಾರತೀಯ ಸೇನಾ ಶಕ್ತಿಗೆ ಧನುಷ್ ಲಗ್ಗೆ – ಕಹಳೆ ನ್ಯೂಸ್

ಹೊಸದಿಲ್ಲಿ: ಭಾರತೀಯ ಸೇನೆಯ ಬತ್ತಳಿಕೆಗೆ ಹೊಸ ಶಕ್ತಿಯೊಂದು ಸೇರ್ಪಡೆಯಾಗುತ್ತಿದೆ, ಹೌದು ‘ದೇಸಿ ಬೊಫೋರ್ಸ್’ ಎಂದೇ ಹೆಸರಾಗಿರುವ ದೂರಗಾಮಿ ಫಿರಂಗಿ ‘ಧನುಷ್’ ಇಂದು (ಸೋಮವಾರ) ಅಧಿಕೃತವಾಗಿ ಭಾರತೀಯ ಸೇನೆ ಸೇರ್ಪಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪೂರ್ಣ ಸ್ವದೇಶಿ ನಿರ್ಮಿತ ಧನುಷ್ 155ಎಂಎಂ/45 ಸಾಮಥ್ರ್ಯದ ಗನ್ ಇದಾಗಿದ್ದು. ಗರಿಷ್ಠ 38 ಕಿ.ಮೀ. ಗುರಿಯನ್ನು ನಿಖರವಾಗಿ ಕ್ರಮಿಸಲ್ಲ ಸಾಮಥ್ರ್ಯವಿರುವ ‘ಧನುಷ್’, ವಿದೇಶಿ ಬೋಪೋರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ಶೇ.81ರಷ್ಟು ಭಾಗಗಳನ್ನು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ದೇಶೀಯವಾಗಿಯೇ ಉತ್ಪಾದಿಸಲಾಗಿದ್ದು, ಭಾರತೀಯ ಸೇನೆಯ ಬತ್ತಳಿಕೆಗೆ ಹೆಚ್ಚಿನ ಬಲ ತುಂಬಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಕ್ಕಿಂ, ಲೇಹ್‍ನಂತಹ ಅತಿಶೀತ ಪ್ರದೇಶ ಹಾಗೂ ರಾಜಸ್ಥಾನದ ಪೋಖ್ರಾನ್, ಒಡಿಶಾದ ಬಾಲ್‍ಸೋರ್‍ನಂತಹ ಅತಿ ಉಷ್ಣ ಪ್ರದೇಶಗಳಲ್ಲೂ ‘ಧನುಷ್’ 155 ಎಂಎಂ/45 ಕ್ಯಾಲಿಬರ್ ಟೊವಡ್ ಗನ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಹಗಲು, ರಾತ್ರಿ ಸೇರಿದಂತೆ ಯಾವುದೇ ವಾತಾವರಣದಲ್ಲೂ, ಯಾವುದೇ ಭೂಪ್ರದೇಶದಲ್ಲೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರಬಲತೆಯನ್ನ ಹೊಂದಿದೆ.

ವಿದೇಶದಿಂದ ಆಮದು ಮಾಡಿಕೊಂಡಿರುವ ಬೊಪೋರ್ಸ್ ಫಿರಂಗಿಗಳಿಗಿಂತ ‘ಧನುಷ್’ನ ದಾಳಿ ಸಾಮಥ್ರ್ಯ ಸುಮಾರು 11 ಕಿ.ಮೀ. ಹೆಚ್ಚಿದೆ. ನ್ಯಾವಿಗೇಶನ್ ಆಧಾರಿತ ದೃಶ್ಯೀಕರಣ ವ್ಯವಸ್ಥೆ, ಆಟೋ-ಲೇಯಿಂಗ್ ಸಿಸ್ಟಮ್, ಆನ್‍ಬೋರ್ಡ್ ಬ್ಯಾಲಿಸ್ಟಿಕ್ ಕಂಪ್ಯೂಟೇಶನ್ ವ್ಯವಸ್ಥೆಯನ್ನು ‘ಧನುಷ್’ ಹೊಂದಿದೆ. ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಸುಲಭವಾಗಿ ಬಳಸಬಹುದಾಗಿದೆ.

ನಿಖರವಾಗಿ ಗುರಿ ತಲುಪುವ ನಿಟ್ಟಿನಲ್ಲಿ ಇದನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ. ಡಿಆರ್‍ಡಿಒ, ಡಿಜಿಕ್ಯೂಎ, ಬಿಇಎಲ್, ಎಸ್‍ಎಐಎಲ್ ಹಾಗೂ ಖಾಸಗಿ ಸಂಸ್ಥೆಗಳ ತಜ್ಞರ ತಂಡ ‘ಧನುಷ್’ ನಿರ್ಮಾಣಕ್ಕೆ ಶ್ರಮಿಸಿದೆ. ಒಂದು ‘ಧನುಷ್’ ಫಿರಂಗಿಯ ವೆಚ್ಚ 14.50 ಕೋಟಿ ರೂ. ಆಗಿದ್ದು, ಈ ರೀತಿಯ 114 ‘ಧನುಷ್’ಗಳ ತಯಾರಿಕೆಗೆ ರಕ್ಷಣಾ ಸಚಿವಾಲಯ ಹಸಿರು ನಿಶಾನೆ ತೋರಿದೆ.

”ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಮೊಟ್ಟ ಮೊದಲ ಬಾರಿಗೆ ದೂರಗಾಮಿ ಫಿರಂಗಿ ‘ಧನುಷ್’ ನಿರ್ಮಿಸಲಾಗಿದೆ. ಈ ‘ದೇಸಿ ಬೊಪೋರ್ಸ್’ ಅನ್ನು ಏಪ್ರಿಲ್ 8ರಂದು ಶಸ್ತ್ರಾಸ್ತ್ರ ಕಾರ್ಖಾನೆಗಳ ಮಂಡಳಿ ಭಾರತೀಯ ಸೇನೆಗೆ ಹಸ್ತಾಂತರಿಸಲಿದೆ,” ಎಂದು ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಪ್ರಧಾನ ನಿರ್ದೇಶಕರು ಟ್ವೀಟ್ ಮಾಡಿದ್ದಾರೆ.