Wednesday, November 20, 2024
ಸುದ್ದಿ

ಉಪ್ಪಿನಂಗಡಿ ಅಲ್ಲ ಅಪ್ಪಿನಾಂಗಡಿ: ಗೂಗಲ್ ಅವಾಂತರ – ಕಹಳೆ ನ್ಯೂಸ್

ದಿನಕಳೆದಂತೆ ನಾವು ಜೀವಿಸುವ ಜೀವನ ಶೈಲಿಯು ತಂತ್ರಜ್ಞಾನದ ವೇಗಕ್ಕೆ ಬದಲಾಗುತ್ತಾ ಹೋಗುತ್ತಿವೆ. ನಾವಿಂದು ಸಂಪರ್ಕಕ್ಕಾಗಿ ಅಥವಾ ಮಾಹಿತಿಯ ಅಗತ್ಯತೆಗಾಗಿ ಅಂತರ್ಜಾಲವನ್ನು ತುಂಬಾ ಅವಲಂಬಿಸಿದ್ದೇವೆ. ಅದರಲ್ಲೂ ನಾವೆಲ್ಲಾದರೂ ಹೊಸ ಪ್ರದೇಶಕ್ಕೆ ಪ್ರಯಾಣ ಬೆಳೆಸಿದಾಗ ಅಥವಾ ಮಾಹಿತಿಗಾಗಿ ಗೂಗಲ್ ಮ್ಯಾಪನ್ನು ಖಂಡಿತಾ ಬಳಸುತ್ತೇವೆ.

ಹಿಂದೆ ಗೂಗಲ್ ಮ್ಯಾಪಿನಲ್ಲಿ ಸ್ಥಳದ ಹೆಸರನ್ನು ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರ ನಮೂದಿಸಲಾಗುತ್ತಿತ್ತು, ತದನಂತರ ಕನ್ನಡ ಸೇರಿ ಪ್ರಾದೇಶಿಕ ಭಾಷೆಯಲ್ಲಿ ಸ್ಥಳದ ಹೆಸರನ್ನು ನಮೂದಿಸಲು ಆರಂಭವಾಯಿತು. ಆದರೆ ನಮೂದಿಸಿದ ಹೆಸರಿನಲ್ಲಿ ಕನ್ನಡದ ಕೊಲೆಯಾಗಿರುವುದು ವಿಷಾಧನೀಯ ಉಪ್ಪಿನಂಗಡಿಗೆ ‘ಅಪ್ಪಿನಾಂಗಡಿ’ ಎಂದು ಕಲ್ಲಡ್ಕಕ್ಕೆ ‘ಕಲ್ಲಾಡ್ಕ’ ಎಂದು ಕಂಬಳಬೆಟ್ಟಿಗೆ ‘ಕಂಬಲಬೇತ್ತು’ ಪಾಣೆಮಂಗಳೂರಿಗೆ ‘ಪಾನೆಮಂಗೂರ್’ ಎಂದು ತಪ್ಪು ತಪ್ಪಾಗಿ ಬರೆಯಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗೂಗಲ್ ಅಧಿಕಾರಿಗಳು ಗಮನಹರಿಸಬೇಕಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು