ಕಿತ್ತು ತಿನ್ನೋ ಬಡತನ, ಮನದಲ್ಲಿ ಹೇಳಲಾರದ ನೋವು, ಒಂದು ಹೊತ್ತಿನ ಊಟ ಮಾಡಿದ್ರೆ ಅದೇ ಸಂತೋಷ, ಹೌದು ಇದು ಬಡತನದ ಬೇಗೆಯಲ್ಲಿ ಬೆಂದು ಹೋಗಿರುವ ಮೀನಾಕ್ಷಿ ಗೋವಿಂದ ಕುಲಾಲ್ ಅವರ ನೋವಿನ ಕೂಗು.
ಬಂಟ್ವಾಳ ತಾಲೂಕಿನ, ಸಜೀಪಮೂಡ ಗ್ರಾಮದ ನಗ್ರಿ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಮೀನಾಕ್ಷಿ ಗೋವಿಂದ ಕುಲಾಲ್ ಅವರ ಸ್ಧಿತಿ, ಈ ಎರಡು ಜೀವಗಳಿಗೆ ಜೀವಾಳ ಅಂದರೆ ಅದು ಎರಡು ಹೆಣ್ಣು ಮಕ್ಕಳು. ಈ ಮನೆಗೆ ಆಸರೆ ಅನ್ನೊರು ಯಾರು ಇಲ್ಲ, ಮನೆಯ ನೊಗಹೊತ್ತು ಜೀವನದ ಬಂಡಿ ಸಾಗಿಸುತ್ತಿದ್ದ ಗೋವಿಂದ ಕುಲಾಲ್ ಅವರು ಕೆಲವು ವರ್ಷಗಳ ಹಿಂದೆ ಪಾಶ್ರ್ವವಾಯುವಿಗೆ ತುತ್ತಾಗಿದ್ದಾರೆ.
ಹೀಗಾಗಿ ಮನೆಯ ಎಲ್ಲ ಆಗು ಹೋಗುಗಳ ಭಾರವನ್ನ ಹೊತ್ತುಕೊಂಡ ಮೀನಾಕ್ಷಿಯವರು ಗಂಡನನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ, ಮೀನಾಕ್ಷಿ ಅವರು ಎಲ್ಲಿಗಾದರು ಹೊರಗೆ ಕೆಲಸ ಮಾಡಿ ಒಂದಿಷ್ಟು ಸಂಪಾದಿಸೋಣ ಅದರೆ ಮನೆಯಲ್ಲಿ ಪಾಶ್ರ್ವವಾಯುವಿಗೆ ತುತ್ತಾದ ಗಂಡನನ್ನು ಬಿಟ್ಟು ಹೋಗುವಂತಿಲ್ಲ, ಹೀಗಾಗಿ ಇವರ ನೋವಿಗೆ ಸ್ಥಳೀಯ ಸಂಘಸಂಸ್ಥೆಗಳ ಮತ್ತು ನಾಗರಿಕರು ಸಹಾಯ ಹಸ್ತ ಚಾಚಿದ್ದಾರೆ, ಇವರ ಸಹಾಯದಿಂದ ಔಷಧಿಗೆ ಮತ್ತು ಮನೆ ನಿರ್ವಹಣೆಗೆ ಸಹಾಯವಾಗುತ್ತಿದೆ. ಈ ಮನೆ ಹಳೆಯದಾಗಿದ್ದು ಬೀಳುವ ಪರಿಸ್ಥಿತಿಯಲ್ಲಿ ಇದೆ.
ಕಳೆದ ಎರಡು ವರ್ಷದ ಹಿಂದೆ ಸಂಘ ಸಂಸ್ಥೆಯ ಯುವಕರಿಂದ ರಿಪೇರಿ ಮಾಡಿಕೊಟ್ಟಿದ್ದರು. ಮತ್ತೆ ಅದೆ ಯುವಕರು ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ತಾ.03-04-2019 ರಂದು ಬುದವಾರ ಅಡಿಗಲ್ಲು ಇಟ್ಟಿದ್ದಾರೆ. ಸಹೃದಯಿಗಳು ಅವರ ಕಾರ್ಯಕ್ಕೆ ಕೈಜೋಡಿಸಿ ಮನೆ ನಿರ್ಮಾಣಕ್ಕೆ ಸಹಾಯಹಸ್ತ ನೀಡಬೇಕಾಗಿ ವಿನಂತಿ.
ಖಾತೆ : ಕರ್ಣಾಟಕ ಬ್ಯಾಂಕ್ ಮಂಚಿ.
ಖಾತೆ ಸಂಖ್ಯೆ: 4652500101879401
Ifsc code : KARB0000465
ತಮ್ಮ ಕೈಲಾದಷ್ಟು ಸಹಾಯ ಮಾಡಬೇಕಾಗಿ ವಿನಂತಿ.
ಲೋಹಿತ್ ಪನೊಲಿಬೈಲ್ : 9731530124, ಯಶವಂತ್ ನಗ್ರಿ : 9916054307
ರವಿ ನಗ್ರಿ : 9741502667