ಪ್ರಧಾನಿ ಅಭ್ಯರ್ಥಿಯಾಗಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೂಕ್ತ: ಮಾಜಿ ಪ್ರಧಾನಿ ಹಾಗೂ ಎಚ್.ಡಿ ದೇವೇಗೌಡ ಹೇಳಿಕೆ – ಕಹಳೆ ನ್ಯೂಸ್
ಅಮರಾವತಿ: ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿಯಾಗಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಸೂಕ್ತ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿಕೆಯನ್ನು ನೀಡಿದ್ದಾರೆ. ತಿರುವೂರಿನಲ್ಲಿ ಚುನಾವಣೆ ಸಭೆ ಉದ್ದೇಶಿಸಿ ಮಾತನಾಡಿದ ಹೆಚ್‍ಡಿಡಿ, ಅತ್ಯಂತ ಕಠಿಣ ಸನ್ನಿವೇಶದಲ್ಲಿ ಮಹತ್ವದ ಜವಾಬ್ದಾರಿ ಹೊರಲು ನಾಯ್ಡು ಒಪ್ಪಿಕೊಂಡಿದ್ದಾರೆ.
ಚಂದ್ರಬಾಬು ನಾಯ್ಡು ಯಾಕೆ ಪ್ರಧಾನಿಯಾಗಬಾರದು ಎಂದೂ ಅವರು ಪ್ರಶ್ನಿಸಿದರು. ‘ಪ್ರಜಾಪ್ರಭುತ್ವವನ್ನು ನಾಶಪಡಿಸುವ ಮೋದಿ ಅವರ ಹುನ್ನಾರವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಎದುರಿಸಲು ಮುಂದಾದವರು ನಾಯ್ಡು. ಹೀಗಾಗಿ ಅವರು ಪ್ರಧಾನಿಯಾಗಲು ಸೂಕ್ತ’ ಎಂದು ದೇವೇಗೌಡರು ಎಂದು ಹೇಳಿದರು.
ಮಹಾಘಟಬಂಧನ ಮೋದಿ ಸರಕಾರದ ವಿರುದ್ಧ ಹೋರಾಡಲು ಮುಂದಾಗಿದ್ದರೂ ತನ್ನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಪ್ರಕಟಿಸಿಲ್ಲ. ಯಾಕೆಂದರೆ ಘಟಬಂಧನದ ಯಾವ ಪಕ್ಷಗಳೂ ಇನ್ನೊಂದು ಪಕ್ಷದ ನಾಯಕ ಪ್ರಧಾನಿ ಹುದ್ದೆಗೇರುವುದನ್ನು ಬಯಸುವುದಿಲ್ಲ. ಇಂತಹ ಘಟಬಂಧನ ಮೋದಿ ಅವರನ್ನು ಎದುರಿಸಲು ಸಾಧ್ಯವೆ? ಎಂದು ಬಿಜೆಪಿ ಪದೇ ಪದೇ ಲೇವಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೌಡರು ಚಂದ್ರಬಾಬು ನಾಯ್ಡು ಹೆಸರು ಪ್ರಸ್ತಾಪಿಸಿದರು ಎನ್ನಲಾಗಿದೆ.