Monday, November 18, 2024
ಸುದ್ದಿ

ಪ್ರಕೃತಿ ವಿಕೋಪ, ಯುದ್ಧ ಭೀತಿ, ಹೊಸ ರೋಗ: ಭವಿಷ್ಯ ನುಡಿದ ಸದಾಶಿವಪ್ಪಯ್ಯ ಸ್ವಾಮಿ – ಕಹಳೆ ನ್ಯೂಸ್

ಈ ವರ್ಷವೂ ಮನುಕುಲಕ್ಕೆ ಆತಂಕ ಮೂಡಿಸುವ ಪ್ರಕೃತಿ ವಿಕೋಪದ ಜೊತೆ ಯುದ್ಧ ಭೀತಿಯಿದೆ. ವೈದ್ಯರಿಗೂ ಸವಾಲಾಗುವ ಹೊಸ ರೋಗಗಳು ಕಾಣಿಸಿಕೊಳ್ಳಲಿವೆ ಎಂದು ಭಯಂಕರ ಭವಿಷ್ಯವನ್ನು ಅವರು ತೆರೆದಿಟ್ಟಿದ್ದಾರೆ. ಅದರ ಜೊತೆಗೆ, ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಕತ್ನಳ್ಳಿ ಶ್ರೀ ಸದಾಶಿವ ದೇವಸ್ಥಾನದ ಕಾರ್ಣಿಕರು ಭವಿಷ್ಯ ಹೇಳಿದ್ದಾರೆ.

ಈ ಬಾರಿ ಬಂಗಾರ, ತಾಮ್ರ, ಕಬ್ಬಿಣ ಮಣ್ಣಿನ ಕೊಡಗಳನ್ನು ಹಿಡಿದು ನಾಯಕರು ನಿಮ್ಮೆಡೆಗೆ ಬರ್ತಾರೆ. ಎಚ್ಚರಿಕೆಯಿಂದ ಅಮೃತವಿರುವ ಮಣ್ಣಿನ ಗಡಿಗೆ ತರುವ ನಾಯಕನಿಗೆ ಮತ ಹಾಕಿ. ವಿಶ್ವದಲ್ಲಿ ದಾಸನಾಗುವುದಕ್ಕಿಂತ ಭಾರತವನ್ನು ಈಶನನ್ನಾಗಿ ಮಾಡುವ ನಾಯಕ ಪರ ಬೆಂಬಲಕ್ಕೆ ನಿಲ್ಲಿ ಎಂದು ಕತ್ನಳ್ಳಿ ಸದಾಶಿವ ದೇವಸ್ಥಾನದ ಕಾರ್ಣಿಕ ಸದಾಶಿವಪ್ಪಯ್ಯ ಸ್ವಾಮಿ ಕರೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುಗಾದಿ ಅಂಗವಾಗಿ ವಿಜಯಪುರ ಜಿಲ್ಲೆಯ ಕತಕನಹಳ್ಳಿ ಅರ್ಥಾತ್ ಕತ್ನಳ್ಳಿಯಲ್ಲಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಅಂಗವಾಗಿ ಇಲ್ಲಿ ಕಾರ್ಣಿಕ ನುಡಿಯುವ ಭವಿಷ್ಯ ಹೆಸರುವಾಸಿ. 2012, 2013, 2014ರಲ್ಲಿ ಈ ಕಾರ್ಣಿಕರು ಚಹಾ ಮಾರುವ ವ್ಯಕ್ತಿ ದೇಶದ ಚುಕ್ಕಾಣಿ ಹಿಡಿಯಲಿದ್ದಾನೆ ಎಂದು ಹೇಳಿದ್ದು ನಿಜವಾಗಿದೆ. ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದು ಈಗ ಇತಿಹಾಸ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಿನಿಂದ ಇಂದಿನವರೆಗೂ ಪ್ರಕೃತಿ ವಿಕೋಪಗಳು, ಅತೀವೃಷ್ಠಿ, ಅನಾವೃಷ್ಠಿ, ಪ್ರಳಯ, ಯುದ್ಧ ಮತ್ತು ರಾಜಕೀಯ ಆಗುಹೋಗುಗಳ ಭವಿಷ್ಯ ನುಡಿಯುವ ಈ ಕಾರ್ಣಿಕರ ಮಾತು ನಿಜವಾಗುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಭವಿಷ್ಯ ನುಡಿಯುವ, ಅಂದರೆ ಹೇಳಿಕೆ ನೀಡುವ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಭಕ್ತರು ನೆರೆದಿದ್ದರು. ಭಕ್ತರಿಂದ ಪಾದಪೂಜೆ ನೆರವೇರಿದ ಬಳಿಕ ಹೇಳಿಕೆ ನೀಡಿದ ಕಾರ್ಣಿಕ ಶ್ರೀ ಸದಾಶಿವಪ್ಪಯ್ಯ ಸ್ವಾಮೀಜಿ, ಈ ಬಾರಿ ವಿಕಾರ ನಾಮ ಸಂವತ್ಸರವನ್ನು ಭಾರತ ಶಿಕಾರಿಯನ್ನನಾಗಿ ಮಾಡಬೇಕಿದೆ.

ಈ ಚುನಾವಣೆಯಲ್ಲಿ ಮತಿಯನ್ನು ಉಪಯೋಗಿಸಿ ಮತ ಹಾಕಿ. ಬಿಕಾರಿಗಳಾಗಬೇಕೆಂದರೆ ಬೇಕಾದವರಿಗೆ ಮತ ಹಾಕಿ. ನೀವು ಸಿಂಹ ಆಗಬೇಕಾದರೆ ನಿಮಗೆ ಇಷ್ಟವಾದವರಿಗೆ ಮತ ಹಾಕಿ. ನಿಮ್ಮ ಮತ ಕೇಳಲು ಬಂಗಾರದ ಕೊಡದಲ್ಲಿ ವಿಷ ತರ್ತಾರೆ. ತಾಮ್ರದಲ್ಲಿ ಕಲುಷಿತವನ್ನು ತರ್ತಾರೆ. ಕಬ್ಬಿಣದ ಕೊಡದಲ್ಲಿ ಮಲಿನ ವಸ್ತುವನ್ನು ತರ್ತಾರೆ. ಮಣ್ಣಿನ ಕೊಡದಲ್ಲಿ ಅಮೃತ ತರ್ತಾರೆ.

ನಿಮಗ್ಯಾವ ಕೊಡ ಇಷ್ಟ ನೀವೇ ಯೋಚಿಸಿ. ಬಂಗಾರದ ಕೊಡ ಮೆಚ್ಚಿದರೆ ಉಳಿಗಾಲವಿಲ್ಲ. ಈ ದೇಶವನ್ನು ದಾಸನನ್ನಾಗಿ ಮಾಡುವ ಮುಖಂಡರು ಕೆಲವರಿದ್ದಾರೆ. ಈ ದೇಶವನ್ನು ವಿಶ್ವದಲ್ಲಿ ಈಶನನ್ನಾಗಿ ಮಾಡುವ ಕೆಲವು ಮುಖಂಡರು ಇದ್ದಾರೆ. ಈ ದೇಶವನ್ನು ಈಶನನ್ನಾಗಿ ಮಾಡಿ ನಿಮ್ಮನ್ನೆಲ್ಲ ಸ್ವತಂತ್ರವಾಗಿ ಸಮೃದ್ಧಿಯಾಗಿ ನಿಶ್ಚಿಂತೆಯಿಂದ ಬಾಳುವಂತೆ ಮಾಡುವವರಿಗೆ ಮತ ಹಾಕಿ ಎಂದು ಕಿವಿಮಾತು ಹೇಳಿದರು.

ಈ ಬಾರಿ ಕಳೆದ ಸಲಕ್ಕಿಂತ ಉತ್ತಮ ಮಳೆಯಾಗಲಿದೆ. ರೋಗಗಳ ಬಾಧೆಯೂ ಕಾಡಲಿದೆ. ವೈದ್ಯರಿಗೂ ತಲೆನೋವು ತರುವ ಹೊಸ ರೋಗಗಳು ಕಾಣಿಸಿಕೊಳ್ಳಲಿವೆ. ಸದಾಶಿವನ ನಾಮಸ್ಮರಣೆಯಿಂದ ಈ ರೋಗಗಳಿಂದ ಮುಕ್ತಿ ಸಾಧ್ಯ ಎಂದು ಅವರು ಹೇಳಿದರು.

ಪಂಚಮಹಾಭೂತಗಳು, ಅದರಲ್ಲಿಯೂ ಒಂದು ಭೂತದಳಗಿನ ನಾಲ್ಕು ಭೂತಗಳು ಬೆಂಕಿ, ನೀರು, ಗಾಳಿ, ಭೂಮಿ ಉಲ್ಟಾಪಲ್ಟಾ ಆಗಲಿವೆ. ಯಾರಾರಿಗೆ ಎಲ್ಲೆಲ್ಲಿ ಆಗ್ತಾವೋ ಗೊತ್ತಿಲ್ಲ. ಗಾಳಿ, ಗೂಳಿ, ಧಾಳಿ, ಭಯ, ಭೀತಿ ಬಾಂಬ್, ಭೂಕಂಪ ಎಲ್ಲವೂ ನಡೆಯಲಿವೆ ಎಂದು ಈ ವರ್ಷದಲ್ಲಿ ಪ್ರಕೃತಿ ವಿಕೋಪ ಮತ್ತು ಯುದ್ಧ ನಡೆಯುವ ಬಗ್ಗೆ ಸುಳಿವು ಶ್ರೀ ಸದಾಶಿವಪ್ಪಯ್ಯ ಸ್ವಾಮೀಜಿ ಸುಳಿವು ನೀಡಿದರು.

ಕಳೆದ ಹತ್ತಾರು ದಶಕಗಳಿಂದ ಈ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಕ್ತಿ ಭಾವದಿಂದ ಪಾಲ್ಗೋಲ್ಲುತ್ತಾರೆ.