Monday, November 18, 2024
ಸುದ್ದಿ

ಬಿಜೆಪಿ ಪ್ರಣಾಳಿಕೆಯನ್ನ ಟೀಕಿಸಿದ ರಮ್ಯಾ – ಕಹಳೆ ನ್ಯೂಸ್

ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ವಿಚಾರಕ್ಕೆ ಸಂಬಂದಿಸಿದಂತೆ ಅನೇಕ ವಿರೋದ್ಧಗಳು ವ್ಯಕ್ತವಾಗುತ್ತಿದೆ, ಜೊತೆಗೆ ಅನೇಕರು ಪ್ರಣಾಳಿಕೆಯನ್ನ ಕೆಣಕಲು ಪ್ರಾರಂಭಿಸಿದ್ದಾರೆ. ಇದರಂತೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗಗಳ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಿ ಸುಮಾರು 75 ಅಂಶಗಳ ಸಂಕಲ್ಪ ಪತ್ರ ಎಂಬ ಹೆಸರಿನ ಪ್ರಣಾಳಿಕೆಯ ಬಗ್ಗೆ ರಮ್ಯ ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆ ಸಂಪೂರ್ಣವಾಗಿ 2014ರ ಪ್ರಣಾಳಿಕೆಯ ಕಾಪಿಯಾಗಿದೆ.
ಬಿಜೆಪಿಯ ಅಸಲಿ ಪ್ರಣಾಳಿಕೆ ಹೀಗಿದೆ.
* ಪ್ರಜಾಪ್ರಭುತ್ವ ಬದಲು ಸರ್ವಾಧಿಕಾರಿ ಧೋರಣೆ ಹೇರುವುದು.
* ಕೋಮು ಶಕ್ತಿಗಳ ಧ್ರುವೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರ
* ಮಹಿಳೆ ಸುರಕ್ಷತೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ
* ವಂಚನೆ ಮಾಡುವವರಿಗೆ ರಕ್ಷಣೆ, ಚೌಕಿದಾರ ಹೆಸರಿನಲ್ಲಿ ನಿರುದ್ಯೋಗ ಸೃಷ್ಟಿ
* 70 ವರ್ಷಗಳ ನಿರುದ್ಯೋಗ ಸಮಸ್ಯೆ ಎಂದು ಸುಳ್ಳು ಹೇಳಿಕೆ
* ಸಾಲಮನ್ನಾ ಎಂಬ ಸುಳ್ಳು ಅಶ್ವಾಸನೆ, ನೋಟ್ ಬ್ಯಾನ್ ಮಾಡುವ ಹುನ್ನಾರ
* ಲೋಕಪಾಲ ಸ್ಥಾಪನೆ ಆಗಿಲ್ಲ, ಅರ್ ಟಿಐ ಅರ್ಜಿ ಸ್ವೀಕರಿಸಿ, ಉತ್ತರಿಸಿಲ್ಲ
* ದೇಶ 2018ರಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ರೈತ ಪ್ರತಿಭಟನೆ ಕಂಡಿತು.
* 2 ಕೋಟಿ ಉದ್ಯೋಗ ಸೃಷ್ಟಿ ಎಂಬ ಸುಳ್ಳು ಆಶ್ವಾಸನೆ
ಈ ರೀತಿಯಾಗಿ ಬಿಜೆಪಿ ಪ್ರಣಾಳಿಕೆಯನ್ನ ರಮ್ಯ ಕಾಲೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು