Sunday, November 17, 2024
ಸುದ್ದಿ

ಬೆಳ್ತಂಗಡಿ ಘಟಕಕ್ಕೆ ಜಿಲ್ಲಾ ಕಮಾಡೆಂಟ್ ಭೇಟಿ : ಗೃಹರಕ್ಷಕರ ಚುನಾವಣಾ ಮಾರ್ಗದರ್ಶಿ ಕೈಪಿಡಿ ಬಿಡುಗಡೆ – ಕಹಳೆ ನ್ಯೂಸ್

ಬೆಳ್ತಂಗಡಿ ; 2019ರ ಲೋಕಸಭಾ ಚುನಾವಣಾ ಪೂರ್ವ ತಯಾರಿ ಸಂಬಂಧಿಸಿದಂತೆ ಬೆಳ್ತಂಗಡಿ ಘಟಕದ ವಾರದ ಕವಾಯತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರುರವರು ಭೇಟಿ ನೀಡಿ ವಾರದ ಕವಾಯತು ವೀಕ್ಷಣೆ ಮಾಡಿದರು. ನಂತರ ಚುನಾವಣಾ ಮಾರ್ಗದರ್ಶೀ ಕೈಪಿಡಿ ಬಿಡುಗಡೆ ಮಾಡಿದರು.

ಸ್ವತಃ ಜಿಲ್ಲಾ ಕಮಾಡೆಂಟ್ ತಯಾರಿಸಿದ ಚುನಾವಣಾ ಮಾರ್ಗದರ್ಶಿ ಕೈಪಿಡಿ ಬಿಡುಗಡೆ:-

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗೃಹರಕ್ಷಕ/ರಕ್ಷಕಿಯರಿಗೆ 2019ರ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 14 ಘಟಕಗಳಿಗೆ ತಾವೇ ತಯಾರಿಸಿದ ಚುನಾವಣಾ ಕೈಪಿಡಿಯನ್ನು ಮೊದಲಿಗೆ ಬೆಳ್ತಂಗಡಿ ಘಟಕದಲ್ಲಿ ಬಿಡುಗಡೆಗೊಳಿಸಲಾಯಿತು. ಚುನಾವಣಾ ಸಂದರ್ಭದಲ್ಲಿ ಯಾವ ರೀತಿ ವ್ಯವಹರಿಸಬೇಕು, ಯಾವ ರೀತಿ ಕಾರ್ಯ ನಿರ್ವಹಿಸಬೇಕು.

ಹಾಗೂ ಚುನಾವಣಾ ಸಂದರ್ಭದಲ್ಲಿ ಯಾವ ಕ್ರಮ ಅನುಸರಿಸಬೇಕು, ಯಾವ ಕ್ರಮ ಅನುಸರಿಸಬಾರದು, ಎಂಬ ಪೂರ್ಣ ಮಾಹಿತಿ ಈ ಕೈಪಿಡಿಯಲ್ಲಿ ಇದೆ. ನಂತರ ಶಾಂತಿಯುತ ಮತ್ತು ನ್ಯಾಯಯುತವಾದ ಮತದಾನ ನಡೆಯುವ ಪ್ರಕ್ರಿಯೆಯಲ್ಲಿ ಪೋಲಿಸರೊಂದಿಗೆ ಎಲ್ಲಾ ಗೃಹರಕ್ಷಕರು ಸಹಕರಿಸಬೇಕೆಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯನಂದ ಹಾಗೂ ಹಿರಿಯ ಗೃಹರಕ್ಷಕರಾದ S.L ಅಪ್ಪು A.S.L . ಚಾಕೋ,ಡೆನ್ನಿಸ್, ಹಾಗೂ 55 ಗೃಹರಕ್ಷಕರು ಉಪಸ್ಥಿತರಿದ್ದರು.