Recent Posts

Sunday, November 17, 2024
ಸುದ್ದಿ

ನಾವೇನು ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ: ನಾವೇ ದುಡಿಬೇಕು ನಿಖಿಲ್ ಗೆ ಟಾಂಗ್ ಕೊಟ್ಟ ಯಶ್ – ಕಹಳೆ ನ್ಯೂಸ್

ಮಂಡ್ಯ: ನಾವೇ ದುಡಿಬೇಕು, ನಾವೇನು ಅಪ್ಪ ಮತ್ತು ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ ಅಂತ ರಾಕಿಂಗ್ ಸ್ಟಾರ್ ಯಶ್ ನಿಖಿಲ್ ಗೆ ಟಾಂಗ್ ನೀಡಿದ್ದಾರೆ. ಅವರು ಇಂದು ಮಂಡ್ಯದ ಯರಗನಹಳ್ಳಿಗೆ ಆಗಮಿಸಿದ್ದರು. ಇದೇ ವೇಳೆ ಊರಿನ ಮಹಿಳೆಯೊಬ್ಬರು ಬಾಡಿಗೆ ಮನೆಯಲ್ಲಿದ್ದೀಯಾ ನಿಮ್ಮ ಯೋಗ್ಯತೆ ಬಗ್ಗೆ ಮಾತನಾಡಿದ್ದಾನೆ ಅಂತ ಯಶ್ ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯಶ್ ‘ನಾವು ಬಡವರು. ನಮಗೆ ಯೋಗ್ಯತೆ ಇರಲ್ಲ. ದುಡಿದು ಸಹಾಯ ಮಾಡಿಕೊಳ್ಳಬೇಕು. ಮಾಡೋಣ ಬಿಡಿ. ನಾವು ನಮ್ಮ ಅಪ್ಪ ಹಾಗೂ ತಾತನ ಆಸ್ತಿಯಿಲ್ಲ ಬದುಕಿಲ್ಲ. ಯೋಗ್ಯತೆ ಬೆಳೆಸಿಕೊಳ್ಳೋಣ ಬಿಡಿ’ ಎಂದು ಟಾಂಗ್ ನೀಡಿದರು.

ನಿಖಿಲ್ ಹೇಳಿದ್ದೇನು?
ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಯಶ್ ಗೆ ನಿಖಿಲ್ ಟಾಂಗ್ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು