Recent Posts

Monday, January 20, 2025
ಸುದ್ದಿ

ಹಿಂದು ಭಯೋತ್ಪಾದನೆ ವಿವಾದ | ನಟ ಕಮಲ್‌ ಹಾಸನ್‌ ವಿರುದ್ಧ ಎಫ್ಐಆರ್‌ಗೆ ಹೈಕೋರ್ಟ್‌ ಸೂಚನೆ

 

ಚೆನ್ನೈ: ಹಿಂದೂ ಭಯೋತ್ಪಾದನೆ ಹೇಳಿಕೆ ನೀಡಿದ್ದ ನಟ ಕಮಲ್‌ ಹಾಸನ್‌ ವಿರುದ್ಧ ಅಗತ್ಯ ಬಿದ್ದರೆ ಎಫ್‌ಐಆರ್‌ ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಚೆನ್ನೈ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಮು ಸಾಮರಸ್ಯವನ್ನು ಕದಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ಕಾರ್ಯದರ್ಶಿ ಕಮಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಸ್‌. ರಮೇಶ್‌, ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರ, ಕಮಲ್‌ ಹಾಸನ್‌ ಅವರು ಹಿಂದುಗಳ ಕೋಮು ಸಾಮರಸ್ಯ ಕದಡುವಂತ ಹೇಳಿಕೆ ನೀಡಿದ್ದಾರೆ. ಇಂದು ಹಿಂದು ಭಯೋತ್ಪಾದನೆ ಎಂದಿರುವ ಅವರು ಮುಂದುವರಿದು ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಭಯೋತ್ಪಾದನೆ ಎಂದರು ಆಶ್ಚರ್ಯವಿಲ್ಲ. ಧರ್ಮಗಳ ಮಧ್ಯೆ ಕೋಲಾಹಲ ಸೃಷ್ಟಿಸುವಂತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಅವರು ತಮಿಳು ಪತ್ರಿಕೆಯೊಂದರ ತಮ್ಮ ಲೇಖನದಲ್ಲಿ, ಬಲಪಂಥೀಯ ಸಂಘಟನೆಗಳು ಹಿಂಸಾಚಾರಕ್ಕೆ ಮುಂದಾಗುತ್ತಿವೆ. ಬಲಪಂಥೀಯರಲ್ಲೇ ಹಿಂದು ಭಯೋತ್ಪಾದನೆ ನುಸುಳಿದೆ ಎಂದು ಹೇಳಿದ್ದರು.

Leave a Response