Recent Posts

Saturday, November 16, 2024
ಸುದ್ದಿ

ವಿವೇಕಾನಂದ ಕಾಲೇಜು: ವಿಶೇಷ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಮನುಷ್ಯ ತನ್ನ ಜೀವನದಲ್ಲಿ ಇರುವ ಸೌಲಭ್ಯ ಅಥವಾ ವ್ಯವಸ್ಥೆಯಿಂದ ಸಂತೃಪ್ತಿಯನ್ನು ಪಡದೆ ಇನ್ನೂ ಬೇಕು ಎಂಬ ಹಂಬಲವನ್ನು ಪಡುತ್ತೇವೆ. ಆದರೆ ಏನೂ ಇಲ್ಲ ಎಂದು ಜೀವಿಸುವುದಕ್ಕಿಂತ ನಮಗೆ ಲಭಿಸಿದ ಜೀವನವನ್ನು ಸಾರ್ಥಕತೆಯಿಂದ ಬದುಕುವುದು ಮುಖ್ಯ. ಅಂತೆಯೇ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಮನುಷ್ಯ ಸಹಜ ಗುಣ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ನಮ್ಮ ಕಣ್ಣ ಮುಂದೆ ಇನ್ನೊಬ್ಬರು ಸಮಸ್ಯೆಯಲ್ಲಿದ್ದರೆ ಅವರಿಗೆ ಸಹಾಯ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಕಥೆಗಾರ, ಸಾಹಿತಿ, ಅಂಕಣಕಾರ ಎ.ಆರ್.ಮಣಿಕಾಂತ್ ತಿಳಿಸಿದರು.

ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಲಲಿತಕಲಾ ಸಂಘ ಹಾಗೂ ಇತರ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಶಾರೀರಿಕ ಸೌಂದರ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತೇವೆ. ಅದರಂತೆ ನಮ್ಮ ಕಣ್ಣು, ಕಿವಿ, ಇತ್ಯಾದಿಗಳು ಇನ್ನೂ ಚೆನ್ನಾಗಿರಬೇಕಿತ್ತು ಎಂದು ಕೊರಗುತ್ತೇವೆ. ಆದರೆ ಸಮಾಜದಲ್ಲಿ ಅಂಗವೈಖಲ್ಯದಿಂದ ಬಳಲುತ್ತಿರುವ ಅನೇಕ ಮಂದಿ ಇದ್ದಾರೆ. ಅವರ ಅಂಗ ನೂನ್ಯತೆ ಮುಂದೆ ನಮ್ಮ ಸೌಂದರ್ಯ ಪ್ರಜ್ಞೆ ಕುರಿತು ಚಿಂತಿಸುತ್ತೇವೆ. ಆದರೆ ಆ ನೂನ್ಯತೆಯ ವ್ಯಕ್ತಿ ಸಮರ್ಥವಾದ ಹಾಗೂ ಸಾಧನೆಯನ್ನು ಮಾಡುವ ಮೂಲಕ ಸಾರ್ಥಕ್ಯ ಜೀವನವನ್ನು ನಡೆಸುತ್ತಾನೆ. ಅದನ್ನೇ ನಾವು ನಮ್ಮ ಜೀವನ ಸ್ಫೂರ್ತಿಯಾಗಿ ಕಾಣಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪಘಾತ ಸಂದರ್ಭ ಕಣ್ಣೆದುರೆ ಪ್ರಾಣಾಪಾಯವಾದಾಗ ಅವರನ್ನು ರಕ್ಷಿಸುವ ಪ್ರಜ್ಞೆಯನ್ನು ನಾವು ಮರೆತ್ತಿದ್ದೇವೆ. ಆದರೆ ಅದೇ ಅಪಘಾತಕ್ಕೊಳಗಾದ ವ್ಯಕ್ತಿ ತಾನು ಕಳೆದುಕೊಂಡ ಅಂಗವನ್ನು ಬಿಟ್ಟು ತನ್ನ ಇತರೆ ಅಂಗವನ್ನು ಉಪಯೋಗಿಸಿಕೊಂಡು ಪ್ರತಿ ಕೆಲಸವನ್ನು ಮಾಡುವ ಸಾಹಸವನ್ನು ಮಾಡುತ್ತಾರೆ. ಆದರೆ ತನ್ನ ಗುರಿಯನ್ನು ಮುಟ್ಟಲು ಆ ವ್ಯಕ್ತಿ ಶ್ರಮಿಸುತ್ತಾರೆ. ಆದರೆ ಸಮಾಜ ಇಂದು ಇವರಿಗೆ ಪ್ರೇರೇಪಣೆ ನೀಡದೆ ಅವರ ಮನೋಬಲವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದು ಸಲ್ಲದು. ಹೆಚ್ಚು ಓದಿ ಕಡಿಮೆ ಬರೆಯುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಏಕೆಂದರೆ ಬರೆಯಲು ಓದು ಬಹು ಮುಖ್ಯ ಎಂದರು.

ಅಪಘಾತದಿಂದ ಕೈ, ಕಾಲು ಕಳೆದುಕೊಂಡ ಅನೇಕ ಮಂದಿ ಬಲಗೈ ಇಲ್ಲದವರು ಎಡ ಕೈಯಲ್ಲಿ ಬರೆಯುವುದು, ಕೈ ಇಲ್ಲದವರು ಕಾಲಿನಲ್ಲಿ ಬರೆಯುವುದು, ಚಿತ್ರ ಬಿಡಿಸುವುದು ಹೀಗೆ ತಮ್ಮ ಗುರಿ ಅಥವಾ ಹಠವನ್ನು ಸಾಧಿಸುತ್ತಾರೆ. ಹಾಗಾಗಿ ನೂನ್ಯತೆಯನ್ನು ಎದುರಿಸಿ ಯಶಸ್ಸಿ ಜೀವನವನ್ನು ನಡೆಸುತ್ತಾರೆ. ಹಾಗಾಗಿ ವ್ಯಕ್ತಿಗೆ ಅಂಗನೂನ್ಯತೆ ಎನ್ನುವುದು ಸಮಸ್ಯೆಯಲ್ಲ. ಅದನ್ನು ಮೆಟ್ಟಿನಿಂತು ಸಾಧನೆಯನ್ನು ನಡೆಸುವುದು ಸಾಧಕನ ಹಾದಿ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಸಾಧನೆಯ ಕಥೆಗಳ ಮೂಲಕ ಜೀವನವನ್ನು ಸಮರ್ಥವಾಗಿ ಎದುರಿಸಬಹುದು ಎಂದು ಕಿವಿಮಾತುಗಳನ್ನಾಡಿದರು. ಆ ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುವ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಐಕ್ಯುಎಸಿ ಸಂಯೋಜಕ, ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಣಿಕಾಂತ್ ಅವರ ಜೀವನಕ್ಕೆ ಪ್ರೇರಣೆ ನೀಡುವ ಕಥೆಗಳನ್ನು ಓದುವ ಮೂಲಕ ಸಾಧನೆಯನ್ನು ಮಾಡಿದಂತವರು ಅನೇಕ ಮಂದಿಗಳಿದ್ದಾರೆ. ಹಾಗಾಗಿ ಇವರ ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಮಾರಾಟವಾದ ಕೃತಿಗಳಾಗಿದೆ. ಮಾನವೀಯ ಮೌಲ್ಯ ನೀಡುವ ಹಲವು ಕಥೆ, ಕೃತಿಗಳು ಎಲ್ಲರಿಗೂ ಸ್ಫೂರ್ತಿ. ಮನುಷ್ಯತ್ವದ ಮೌಲ್ಯಗಳನ್ನು ತಿಳಿಸುವ ನುಡಿಚಿತ್ರಗಳಂತಹ ನೈಜ ಘಟನೆಗಳ ಬರವಣಿಗೆಗಳು ಪ್ರತಿಯೊಬ್ಬರಿಗೂ ಜೀವನವನ್ನು ಯಾವರೀತಿಯಾಗಿ ನಡೆಸಬೇಕು ಎಂಬ ಕಿವಿ ಮಾತುಗಳನ್ನು ಓದುಗರಿಗೆ ಮುಟ್ಟಿಸುವ ಲೇಖಕ ಎಂದು ಅಭಿಪ್ರಾಯಪಟ್ಟರು.

ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಶ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.