ಸುಳ್ಯ ತಾಲೂಕು ಅರಂತೋಡಿನ ಶಾಲಾ ಬಳಿ ಗೋವಧೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ರೈಡ್ ಮಾಡಿದ ಘಟನೆ ನಡೆದಿದೆ. ಅರಂತೋಡು ಶಾಲಾ ಬಳಿಯ ಸಂಶುದ್ದಿನ್ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗೋವನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಸರ್ಫುದ್ದಿನ್ನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆಯಲ್ಲಿ ಮುನೀರ್ ಮತ್ತು ಮುಬಾರಕ್ ಎಂಬವರುಗಳು ಓಡಿ ಹೋಗಿದ್ದು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ದನವನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಕೃತ್ಯವನ್ನು ಎಸಗಿದ್ದು ಅವರ ಬಳಿಯಲ್ಲಿದ್ದ 10 ಕೇಜಿ 400 ಗ್ರಾಮ ದನದ ಮಾಂಸ, 2000 ಮತ್ತು ಸ್ಕೇಲ್, ತೂಕದ ಕಲ್ಲು, ಎರಡು ಚೂರಿಗಳು, ಮರದ ತುಂಡುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
You Might Also Like
ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ-ಕಹಳೆ ನ್ಯೂಸ್
ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ನವಂಬರ್ 15 ರಂದು ಸಂಸ್ಥೆಯ ಸಭಾAಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾರ್ಥಿ ಸಂಘದ ಸಭಾಪತಿ ಮೋಕ್ಷಿತ್ ಬಿ...
ರಾಜ್ಯ ಮಟ್ಟದ ಸಹಕಾರ ರತ್ನ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಸಹಕಾರಿ ವಿನಯಕುಮಾರ್ ಸೂರಿಂಜೆ ಮತ್ತು ಡಾ. ಎಸ್ ಆರ್ ಹರೀಶ್ ಆಚಾರ್ಯ – ಕಹಳೆ ನ್ಯೂಸ್
ಮಂಗಳೂರು : ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ಸಹಕಾರ ರತ್ನ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ, ಹಿರಿಯ ಸಹಕಾರಿ ವಿನಯಕುಮಾರ್ ಸೂರಿಂಜೆ...
ಸಂತಫಿಲೋಮಿನ(ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರು ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆ-ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರಿನ ವಿದ್ಯಾರ್ಥಿನಿಯರು 64 ಕೆಜಿ ವಿಭಾಗದ ಸೌತ್ ವೆಸ್ಟ್ ಝೋನ್ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ...
ಕನಸುಗಳು 2024 : ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ-ಕಹಳೆ ನ್ಯೂಸ್
ಪುತ್ತೂರು: ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ರಾಜ್ಯಮಟ್ಟದ “ಕನಸುಗಳು-2024” ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಸ್.ಬಿ.ಎಸ್ ಸಂಸ್ಥೆ ,...