ಉಡುಪಿ:ರಾಮಮಂದಿರ ವಿವಾದ ಬಗೆಹರಿಯುವ ಹಂತಕ್ಕೆ ಬಂದಿದೆ. ಹಲವು ವರ್ಷಗಳ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ, ರಾಮಮಂದಿರ ಬಿಟ್ಟು ಬೇರೆ ಏನೂ ನಿರ್ಮಾಣವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್
ಹಾಗೂ ಪೇಜಾವರಶ್ರೀ ಘೋಷಿಸಿದ್ದಾರೆ.
ಶುಕ್ರವಾರ ಉಡುಪಿ ಕಲ್ಸಂಕದ ರೋಯಲ್ ಗಾರ್ಡನ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಧರ್ಮ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಅವರು ಹೇಳಿದರು.
ಇಂದು ನಾವು ಹೇಳುವ ಪ್ರತಿ ಮಾತು ಕೂಡಾ ಮಾಧ್ಯಮಗಳಲ್ಲಿ ಚರ್ಚಯಾಗುತ್ತಿದೆ. ಹೀಗಾಗಿಯೇ ನಾನು ಖಚಿತವಾಗಿ ಹೇಳುತ್ತಿದ್ದೇನೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ.ಇದು ನಮ್ಮ ಘೋಷಣೆಯಲ್ಲ, ಇದು ನಮ್ಮ ಬದ್ಧತೆ ಎಂದು ಮೋಹನ್ ಭಾಗವತ್ ಹೇಳಿದರು.
2019ರೊಳಗೆ ರಾಮಮಂದಿರ ನಿರ್ಮಾಣ : ಪೇಜಾವರಶ್ರೀ
ಅಯೋಧ್ಯೆಯಲ್ಲಿ 2019ರೊಳಗೆ ರಾಮಮಂದಿರ ನಿರ್ಮಾಣವಾಗಲಿದೆ. ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ಪೇಜಾವರಶ್ರೀಗಳು ಘೋಷಿಸಿದ್ದಾರೆ.
ಗೋಹತ್ಯೆ ಕೇವಲ ಕೇಂದ್ರ ಸರ್ಕಾರದ ವಿಚಾರವಲ್ಲ.ದೇಶದಲ್ಲಿ ಗೋ ಹತ್ಯೆ ಸಂಪೂರ್ಣವಾಗಿ ನಿಷೇಧವಾಗಬೇಕು. ಗೋ ಹತ್ಯೆ ನಿಷೇಧ ಸಂಬಂಧ ರಾಜ್ಯದಲ್ಲಿ ಆಂದೋಲನ ನಡೆಯಲಿ ಎಂದು ಹೇಳಿದರು.
ಉತ್ತಮ ಚಾರಿತ್ರ್ಯ ಭಕ್ತಿ ಹೊಂದಿದ ದಲಿತ ಬ್ರಾಹ್ಮಣನಿಗಿಂತ ಶ್ರೇಷ್ಠ.ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲಾಗುತ್ತಿದೆ.ವೀರಶೈವ, ಲಿಂಗಾಯತ ಎರಡೂ ಹಿಂದೂ ಧರ್ಮವೇ. ಇಬ್ಬರೂ ಶಿವನನ್ನು ಆರಾಧಿಸುತ್ತಾರೆ. ಧರ್ಮದ ಹೆಸರಿನಲ್ಲಿ ಪಕ್ಷಪಾತ, ಭೇದಭಾವ ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು.