ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕುಮಾರಸ್ವಾಮಿಗೆ ಮುತ್ತು ಕೊಟ್ಟಿರುವ ಘಟನೆಯೂ ನಡೆದಿದೆ.
ನಿಖಿಲ್ ಪರವಾಗಿ ಕುಮಾರಸ್ವಾಮಿಯವರು ಗುರುವಾರ ರಾತ್ರಿವರೆಗೂ ಪ್ರಚಾರದಲ್ಲಿತೊಡಗಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕುಮಾರಸ್ವಾಮಿಗೆ ಮುತ್ತು ಕೊಟ್ಟಿದ್ದಾರೆ.
ನಾನು ಕೂಡ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ಆಗ ನೀವು ನನಗೆ ಆಶೀರ್ವಾದ ಮಾಡಿದ್ರಿ. ಇಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ನನಗೆ ಅವಕಾಶ ಕೊಟ್ಟ ರೀತಿ, ಅವನಿಗೂ ಅವಕಾಶ ಕೊಡಿ. ಈಗ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಮಾತನಾಡುವವರು ಯಾರಾದ್ರು ಮನೆಗೆ ಬಂದು ಸಾಂತ್ವನ ಹೇಳಿದ್ದಾರ ಯೋಚನೆ ಮಾಡಿ. ನಾನು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿಲ್ಲ ಎಂದು ಕುಮಾರ ಸ್ವಾಮಿ ಹೇಳಿದರು.
ಎಲ್ಲರ ಸಮಸ್ಯೆಗೂ ಸ್ಪಂದಿಸಿದ್ದೇನೆ ಯಾರೇ ಬಂದು ಸಮಸ್ಯೆ ಹೇಳಿಕೊಂಡರೂ ಸ್ಪಂದಿಸಿದ್ದೇನೆ. ನೀವು ಸತ್ತರೆ ನಾವು ಬರಬೇಕು. ನಾವು ಸತ್ತರೆ ನೀವು ಬರಬೇಕು. ಚುನಾವಣೆ ಮುಗಿದ ನಂತರ ಅವರು ನಿಮ್ಮ ಕೈಗೆ ಸಿಗುವುದಿಲ್ಲ, ನನ್ನ ಸ್ನೇಹಿತ ಅಂಬರೀಶ್ ಬದುಕಿದ್ದಾಗಲೇ ನಿಮ್ಮ ಕಷ್ಟಕ್ಕೆ ಸ್ಪಂದಿಸದ ಅಭ್ಯರ್ಥಿ ಈಗ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದು ಸುಮಲತಾ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.