ಭಾರತದ ಶತ್ರು ರಾಷ್ಟ ಎಂದೆ ಪರಿಗಣಿತವಾಗಿದ್ದ ಪಾಕ್ ಇದೀಗ ಮತ್ತೋ ಭಾರತವನ್ನ ಓಲೈಸಲು ಮುಂದಾಗಿದೆ. ಇಷ್ಟು ದಿನ ಪ್ರಧಾನಿ ಮೋದಿ ಮತ್ತು ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿನ್ನೆಯಷ್ಟೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದು ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ 400 ದೇಗುಲ ಪುನರುಜ್ಜೀವನಕ್ಕೆ ಪಾಕ್ ಸರ್ಕಾರ ನಿರ್ಧರಿಸಿದೆ.
ಭಾರತ-ಪಾಕಿಸ್ತಾನ ಬೇರ್ಪಟ್ಟಾಗ ಬಹುತೇಕ ಹಿಂದೂಗಳು ಪಾಕ್ ತೊರೆದಿದ್ದರು. ಈ ವೇಳೆ ಪಾಕ್‍ನಲ್ಲಿದ್ದ ಬಹುತೇಕ ದೇವಾಲಯಗಳು ಅತಿಕ್ರಮಣ ತೆರವಿನ ವೇಳೆ ಮುಚ್ಚಿಹೋಗಿದ್ದರೆ ಮತ್ತೆ ಕೆಲವು ದೇವಸ್ತಾನಗಳ ಜಾಗ ಖಾಸಗಿಯವರ ಪಾಲಾಗಿತ್ತು. ಇನ್ನು ಕೆಲವು ದೇವಸ್ಥಾನಗಳು ಮದರಸಾ ಆಗಿ ಪರಿವರ್ತನೆ ಆಗಿದ್ದವು.
ಇದೀಗ ಪಾಕಿಸ್ತಾನ ಸರ್ಕಾರ ಇಂಥ ದೇವಸ್ಥಾನಗಳನ್ನು ಪುನಃ ತೆರೆಯಲು ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟು ಅವುಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಲು ಮುಂದಾಗಿದೆ. ಈ ಪ್ರಕ್ರಿಯೆ ಐತಿಹಾಸಿಕವಾದ ಸಿಯಾಲ್ ಕೋಟ್ ಮತ್ತು ಪೇಶಾವರ ದೇವಸ್ಥಾನಗಳ ಹಸ್ತಾಂತರ ಮೂಲಕ ಆರಂಭಗೊಂಡಿದೆ.
ಇನ್ನು ಸಿಯಾಲ್ ಕೋಟ್ ನ ಜಗನ್ನಾಥ ದೇವಾಲಯ ಹಾಗೂ 1000 ವರ್ಷಗಳಷ್ಟು ಹಳೆಯ ತೇಜ್ ಸಿಂಗ್ ಶಿವಾಲಯ ಪುನರುಜ್ಜೀವನಗೊಳ್ಳುತ್ತಿದೆ.