Thursday, November 14, 2024
ರಾಜಕೀಯಸುದ್ದಿ

ಪ್ರಧಾನಿ ನರೇಂದ್ರ ಮೋದಿ ಸುಮಲತಾ ಹೆಸರು ಪ್ರಸ್ತಾಪ – ಬಿಜೆಪಿ ಪರ ಎಂದು ಬಿಂಬಿತವಾದ ಸುಮಲತಾ ಅಂಬರೀಶ್ – ಕಹಳೆ ನ್ಯೂಸ್

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪಾರಂಭವಾಗಿದ್ದು, ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಮತ್ತೋದು ಕೋಲಾಹಲವೆದ್ದಿದೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ತಮ್ಮ ಮೈಸೂರು ಚುನಾವಣಾ ಪ್ರಚಾರದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿರುವುದು ಎಲ್ಲ ಪಕ್ಷದ ನಾಯಕರಿಗೂ ಅಚ್ಚರಿ ತಂದಿತ್ತು. ಈಗ ಇದೇ ನಡೆ ಸುಮಲತಾ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಗೂ ಕಾರಣವಾಗಲಿದೆ ಎನ್ನಲಾಗುತ್ತಿದೆ. ಜಾತ್ಯಾತೀತ ಜನತಾದಳ ಮೋದಿಯವರು ಸುಮಲತಾ ಅವರ ಹೆಸರನ್ನು ಪ್ರಸ್ತಾಪಿಸಿದ್ದನ್ನೇ ಮುಂದಿಟ್ಟುಕೊಂಡು ಸುಮಲತಾ ಬಿಜೆಪಿ ಅಭ್ಯರ್ಥಿ ಎಂಬಂತೆ ಬಿಂಬಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಮೊಮ್ಮಗನಾದ ನಿಖಿಲ್ ಕುಮಾರಸ್ವಾಮಿ ಅವರನ್ನು ಸಂಸತ್ತಿಗೆ ಚುನಾಯಿಸಲು ಜೆಡಿಎಸ್ ಸತತ ಹೋರಾಟ ನಡೆಸುತ್ತಿದೆ. ಇದಕ್ಕಾಗಿ ಪ್ರತಿಯೊಂದು ಸಂಭಾವ್ಯ ಮತದಾರನ ಮೇಲೆ ಅವರು ಗಮನವಿಟ್ಟಿದ್ದಾರೆ. ಇತ್ತ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದೂ ಇನ್ನೂ ಮೂವರು ಅದೇ ಹೆಸರಿನ ಅಭ್ಯರ್ಥಿಗಳ ಜತೆ ಸೆಣೆಸಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಅಂಬರೀಶ್‍ಗೆ ಗೌರವಿಸಿದ ಪ್ರಧಾನಿ ಕುರಿತಂತೆ ಸುಮಲತಾ ಹರ್ಷ ವ್ಯಕ್ತಪಡಿಸಿದ್ದರು. ಕನ್ನಡ ನಾಡಿಗೆ ತಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಪ್ರಸ್ತಾಪಿಸಿದ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಅಲ್ಪಸಂಖ್ಯಾತರ ಕಾರಣಕ್ಕಾಗಿ ಮೋದಿ ಹೆಸರನ್ನು ಪ್ರಚಾರದ ವೇಳೆ ದೂರವಿಟ್ಟಿದ್ದಾರೆ. ಎಲ್ಲಾ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಂಡಿದ್ದ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಮುಸ್ಲಿಮರು, ಮೀನುಗಾರರು, ದಲಿತರು, ಕುರುಬರು ಎಲ್ಲರ ಬಗೆಗೆ ಸಮಾನ ಒಲವನ್ನು ಹೊಂದಿದ್ದಾರೆ. ಅಲ್ಲದೆ ಚುನಾವನೆ ನಾಮಪತ್ರ ಸಲ್ಲಿಕೆಗೆ ಹೋಗುವ ವೇಳೆ ತಾನೆಂದೂ ಬಿಜೆಪಿ ಸೇರಲ್ಲ ಎಂದೂ ಸ್ಪಷ್ಟವಾಗಿ ಹೇಳಿದ್ದರು.

ಆದರೆ ಇದರ ವಿರುದ್ಧ್ಗವಾಗಿ ಹೇಳುತ್ತಿರುವ ಜೆಡಿಎಸ್. ಮೋದಿ ವಿರೋಧಿ ಮತ್ತು ಬಿಜೆಪಿ ವಿರೋಧಿಗಳಾದ ಮುಸ್ಲಿಮರು, ದಲಿತರು ಮತ್ತು ಇತರ ಹಿಂದುಳಿದ ಜಾತಿಗಳ ಮತಗಳನ್ನು ಪಡೆಯಲು ಹೆಚ್ಚು ಪ್ರಯತ್ನದಲ್ಲಿರುವ ಜೆಡಿಎಸ್ ಸುಮಲತಾ ಸ್ಪರ್ಧೆಯಿಂದ ಅಪಾಯಕ್ಕೆ ಸಿಲುಕಿದೆ.

ಅದಕ್ಕಾಗಿ ಅವರ ಮೇಲೆ ನಿರಂತರ ಯಾವುದಾದರೂ ಆರೋಪ ಹೊರಿಸುತ್ತಾ ಸುಮಲತಾ ಅವರ ವಿರುದ್ಧ ಜನಾಭಿಪ್ರಾಯ ಬಲಗೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.