ಪುತ್ತೂರು: ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.) ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಡಡಿ ಸೆಂಟರ್‌ನಲ್ಲಿ 2019ನೇ ಸಾಲಿನ 3ನೇ ವರ್ಷದ ‘ಹಲೋ ಇಂಗ್ಲೀಷ್’ ಕಾರ್ಯಾಗಾರವು ಏಪ್ರಿಲ್ 12ರಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಖ್ಯಾತ ಮತ್ತು ಪರಿಣತ, BSc, DBM, AMIIIE, AIMAPGDM ಪದವೀಧರ ಸತೀಶ್ ಎನ್ ಕೆದಿಲಾಯ, ಮುಂಬಯಿ ಇವರು ಉದ್ಘಾಟಿಸಿ, Learning Skills ಎಂಬ ವಿಷಯವನ್ನು ಪ್ರಸ್ತುತ ಪಡಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಆಂಗ್ಲಭಾಷಾ ಉಪನ್ಯಾಸಕರಾದ ರಾಮಚಂದ್ರ ಭಟ್ ಮಾತನಾಡಿ, ಪುತ್ತೂರು ದಿನೇದಿನೇ ಬೆಳೆಯುತ್ತಿರುವ ಪುಟ್ಟ ನಗರ, ಜಾತ್ರಾಹಬ್ಬದ ಸಂಭ್ರಮದಲ್ಲಿರುವ ಪುತ್ತೂರಿಗೆ ಇನ್ನೊಂದು ಸಂಭ್ರಮವೇ, ಪ್ರಗತಿಯ ‘ಹಲೋ ಇಂಗ್ಲೀಷ್’ ಹಾಗೂ ಆಂಗ್ಲ ಭಾಷೆಯ ಮಹತ್ವವನ್ನು ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಪಿ.ವಿ.ಗೋಕುಲ್‌ನಾಥ್ ವಹಿಸಿದ್ದರು.
ಸಂಸ್ಥೆಯ ಉಪನ್ಯಾಸಕರು ಸಹಕರಿಸಿದರು. ವಿದ್ಯಾರ್ಥಿ ವರ್ಗದವರು, ತರಬೇತಿ ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಸ್ಮಿತಾ ಮಧುಕರ್ ನಿರೂಪಿಸಿ, ಸಂಯೋಜಿಸಿದರು.