ಗೋವಿಂದ..ಗುರು ಗೋವಿಂದ…
ಗೋವರ್ಧನ ಎತ್ತಿ ತನುವಿಂದಾ…ಮೂರ್ತಿಯ ಮಾಡಿ ಮನದಿಂದಾ
||ಗೋವಿಂದ||
ಗುರುವಿನ ಗಿರಿಯಲಿ ಗೋವನು ಮಾಡಿ
ಗೋವಿಗೆ ಗುರುವು ಆಸರೆ ನೀಡಿ
ಗುರುವಿಗೆ ಬಂತು ಗೋವಿನ ವ್ಯಥೆಯೂ
ಗುರುವೇ ಗೋವು ಆದ ಈ ಕತೆಯೂ
||ಗೋವಿಂದ||
ಗುರುವಿಗೆ ಬಂತು ಗೋವಿನ ಕೂಗು
ಅದುವೇ ಗುರುವಿನ ಹೆಜ್ಜೆಯ ಸಾಗು
ಗೋವಿನ ಕೂಗು ವಿಶ್ವಕೆ ಕೇಳಲಿ
ಗೋವಿನ. ಉಳಿವು ವಿಶ್ವದಿ ನಡೆಯಲಿ
||ಗೋವಿಂದ||
ಗುರುವಿಗೆ ಬಂತು ಗೋವಿನ. ಜನನ
ಅದರಲಿ ತಂತು ವಿಶ್ವದ ಮನನ
ಗೋವಿಗೆ ಇಂದು ನ್ಯಾಯವ ನೀಡಿ
ಗುರುವಿನ ಬಯಕೆ ಮುಂದಿದೆ ನೋಡಿ
||ಗೋವಿಂದ||
ವಿಶ್ವಸಿಕ್ಕುನ್ನು ಎಲ್ಲ ಗೋವನು ಅಳಿಸಿ
ಕುಳಿತಿರುವ ಯಾಕೇ ನಿಮ್ಮನು ಉಳಿಸಿ
ನಿಮ್ಮಯ ಎಲ್ಲವೂ ಭಾರವಾದ ಬಿಟ್ಟು
ಗುರುವಿನ ಚರಣಕೆ ಎರಗುವ ಹೊತ್ತು
||ಗೋವಿಂದ||