Sunday, January 19, 2025
ಸುದ್ದಿ

ಎ. 16 ರಂದು ಮಹಾಲಿಂಗೇಶ್ವರನಿಗೆ ‘ ಸ್ವರಾಭಿಷೇಕ ‘ ; ಕಹಳೆ ನ್ಯೂಸ್ ಸಾಂಸ್ಕೃತಿಕ ಸಂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನಿಂದ ಜಿಲ್ಲೆಗೆ ಪ್ರಸಾರವಾಗುತ್ತಿರುವ ಏಕೈಕ ಕೇಬಲ್ ಸುದ್ದಿವಾಹಿನಿ ಕಹಳೆ ನ್ಯೂಸ್ ಎರಡನೇ ವರ್ಷದ ” ಸ್ವರಾಭಿಷೇಕ – 2019 “ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎ. 16 ರಂದು ಮಹಾಲಿಂಗೇಶ್ವರನಿಗೆ ‘ ಸ್ವರಾಭಿಷೇಕ ‘ – ಭಕ್ತಿಗಾಯನ , ನೃತ್ಯ ಸಂಭ್ರಮ

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಹೆಸರಾಂತ ಕಲಾವಿದರ ಸಮಾಗಮದೊಂದಿಗೆ ಸ್ವರಾಭಿಷೇಕ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ಆರ್ಯಭಟ ಪ್ರಶಸ್ತಿ ವಿಜೇತ ಗಾಯಕ ಜಗದೀಶ್ ಪುತ್ತೂರು, ಕರ್ನಾಟಕದ ಮನೆ ಮಾತಾಗಿರುವ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು, ಅಪೇಕ್ಷಾ ಪೈ ಭಾಗವಹಿಸಲಿದ್ದಾರೆ.

ನಂತರ ಮೇಘಕಲಾ ಆರ್ಟ್ಸ್ ಪುತ್ತೂರಿನ ಶ್ರೀಮತಿ ಶಾರದಾ ದಾಮೋದರ ಸಂಯೋಜನೆಯಲ್ಲಿ ಐವತ್ತಕ್ಕೂ ಅಧಿಕ ಕಲಾವಿದರಿಂದ ನೃತ್ಯ ಸಂಭ್ರಮ ನಡೆಯಲಿದೆ.

ದೇವಾಲಯದ ರಾಜಗೋಪುರ, ಸುವರ್ಣ ಕವಚದ ಕೊಡಿಮರದ ನಿರ್ಮಾಣದ ರುವಾರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್‌. ಸುಧಾಕರ್ ಶೆಟ್ಟಿಯವರನ್ನು ಪುತ್ತೂರಿನ ಮಹಾಜನತೆಯ ಪರವಾಗಿ ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಎಸ್.ಜಿ. ಕೋರ್ಪರೇಟ್ಸ್ ಮಾಲ್ಹಿಕರಾದ ಸತ್ಯಶಂಕರ ಭಟ್ , ಉದ್ಯಮಿ ಸತ್ಯನಾರಾಯಣ ಭಟ್ ಕೋಡಿಬೈಲು, ನ್ಯಾಯವಾದಿ ಮಹೇಶ್ ಕಜೆ , ಡಾ ರವಿನಾರಾಯನ್ ಭಟ್ , ಉದ್ಯಮಿ ರಾಮ್ ದಾಸ್ ಪ್ರಭು, ಪ್ರಗತಿ ಸ್ಟಡಿ ಸೆಂಟರ್ ನ ಮಾಲ್ಹಕರಾದ ಗೋಕುಲ್ ನಾಥ್ ಪಿ.ವಿ., ಖ್ಯಾತ ಯಕ್ಷಗಾನ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ವಿಶೇಷ ಆಕರ್ಶಣೆಯಾಗಿ ಚಲನಚಿತ್ರ ರಂಗದ ವಿವಿಧ ನಟ, ನಟಿಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಕಹಳೆ ನ್ಯೂಸ್ ನ ಮುಖ್ಯಸ್ಥ ಶ್ಯಾಮ ಸುದರ್ಶನ ಹೊಸಮೂಲೆ, ಜ‌ನರಲ್ ಮ್ಯಾನೇಜರ್ ಗಣೇಶ ಕೆ. ಕಹಳೆ ನ್ಯೂಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.