Recent Posts

Sunday, January 19, 2025
ರಾಜಕೀಯಸುದ್ದಿ

ಕಡಬ ಜಿ.ಪಂ.ಸದಸ್ಯರ ಬೂತ್‍ನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ – ಕಹಳೆ ನ್ಯೂಸ್

ಕಡಬ: ಲೋಕಸಭಾ ಚುನಾವಣಾ ಕಾವು ಜೋರಾಗಿರುವಂತೆಯೇ ಪಕ್ಷಾಂತರ ಪರ್ವವೂ ಜೋರಾಗತೊಡಗಿದೆ. ವಿವಿಧ ಪಕ್ಷಗಳ ಮುಖಂಡರಲ್ಲದೆ ಕಾರ್ಯಕರ್ತರೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ರವರ ಬೂತ್ ನ ಹಲವು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರದಂದು ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷವು ಜನತೆಗೆ ಮೋಸ ಮಾಡುತ್ತಿದ್ದು, ದೇಶ ರಕ್ಷಣೆ ಮಾಡುವ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಕಡಬ ಪರಿಸರದ ಮೂವತ್ತಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. ಪ್ರಕಾಶ್ ಟಿ.ಕೆ., ಟಿನ್ಸನ್, ಸನೂಶ್, ಸಂತೋಷ್, ಲಿಜೋ, ತಂಬಿ, ಜಾರ್ಜ್, ರಾಬರ್ಟ್, ನಿವಿನ್ ಕೆ.ಇ., ಲಿಬಿನ್, ಈಪನ್, ಡಾಲ್ಸನ್, ಜೋಬಿ, ಜೋಮೋನ್, ಲಿವಿನ್, ಶೀನ, ಅರುಣ್, ಕೃಷ್ಣಪ್ಪ, ಸುನೀಶ್ ಇಚಿಲಂಪಾಡಿ, ಬೆನ್ನಿ, ಜೋಬಿ ಪಂದಲ್ಲೂರು, ಜಾರ್ಜ್ ಕಟ್ಟೆಕ್ಕಿಲ್, ತಂಬಿ, ರಂಜಿತ್ ಹರೀಶ್, ರೆಜಿ, ಆದಂ, ಸುಂದರ ಡೆಪ್ಪಾಜೆ, ಬೇಬು ಕುಬುಲಾಡಿ, ಓನಚ್ಚಂ, ಬಿನು, ಜೋಬಿನ್ ಮತ್ತು ರೋಬಿನ್ ರವರಿಗೆ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿಯವರು ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸತೀಶ್ ನಾಯಕ್, ಅಂಜೇರಿ ಜೋಸ್, ಪ್ರಕಾಶ್ ಎನ್.ಕೆ., ಸತೀಶ್ ಪೂಜಾರಿ, ಫಯಾಝ್ ಕಡಬ ಮೊದಲಾದವರು ಉಪಸ್ಥಿತರಿದ್ದರು.