Saturday, November 23, 2024
ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ – ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ತುಮಕೂರು – ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಚುನಾವಣೆ ಭರವಸೆಗಳು ಈಡೇರಿಸಿದ್ದೀರಾ? ರೈತರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 10 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ಏನಾಯಿತು? ಟೆಲಿಕಾಂ ಕಂಪನಿಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ಚುನಾವಣೆಯ ನಂತರ ಬಿಎಸ್‍ಎಲ್‍ಎನ್ ನ 65000 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮೋದಿ ಅವರು ಜಿಯೋ ಮೊಬೈಲ್‍ನ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ಟೀಕಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಫೇಲ್ ಹಗರಣದ ಬಗ್ಗೆ ಗರಂಗೊಂಡ ವಿಶ್ವನಾಥ್, ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಮೋದಿಯವರು ಭ್ರಷ್ಟರಾಗಿದ್ದು ಜೈಲಿಗೆ ಹೋಗುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಗ್ರಾಮಕ್ಕೆ ಮೊಬೈಲ್ ನೀಡಿದ್ದು ಮಾಜಿ ಪ್ರಧಾನಿ ದಿವಂಗತ ರಾಜೀವ್‍ಗಾಂಧಿ ಅವರು ಪಾಕಿಸ್ತಾನದ ಮೇಲಿನ ದಾಳಿ ಹೊಸದಲ್ಲ. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ 90000 ಸೈನಿಕರನ್ನು ಒತ್ತೆಯಾಳಗಿ ಇರಿಸಿಕೊಳ್ಳಲಾಗಿತ್ತು.

ಕರ್ನಾಟಕಕ್ಕೆ ಮೋದಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಬೆಂಗಳೂರಿಗೆ 70 ಕಿ.ಮೀ ದೂರದಲ್ಲಿರುವ ತುಮಕೂರು ಸಾಕಷ್ಟು ಅಭಿವೃದ್ದಿಯಾಗಬೇಕಿದೆ. ಹಲವು ಕೈಗಾರಿಕೆಗಳು ಬರಬೇಕಾಗಿದೆ. ತುಮಕೂರು ಮತ್ತು ರಾಜಧಾನಿ ಬೆಂಗಳೂರು ಬೆಸೆಯುವಂತಹಕೆಲಸವಾಗಬವೇಕಿದೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದು, ಅವರ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಪ್ರಧಾನಿ ಸ್ಥಾನವನ್ನು ಏರಲು ತುಮಕೂರಿನಿಂದ ನಾವು ಅಭ್ಯರ್ಥಿಯನ್ನು ನಿರೀಕ್ಷೆ ಮಾಡಬಹುದಾಗಿದೆ. ಇವತ್ತಿನ ರಾಜಕಾರಣ ಯಾವ ರೀತಿ ಇದೆ ಎಂಬುದು ತಿಳಿಯುತ್ತಿಲ್ಲ.

ಸಂಸದ ಮುದ್ದಹನುಮೇಗೌಡ ಅವರು ತಮಗೆ ಅವಕಾಶ ಸಿಗದಿದ್ದರೂ ಎಲ್ಲವನ್ನು ಮರೆತು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದರು.

ಅಹಿಂದ ನಾಯಕ ಕೆ.ರಾಜಣ್ಣ ಕೂಡ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಭಾರತೀಯರಷ್ಟೇ ಅಲ್ಲ ವಿಶ್ವದ ಎಲ್ಲೆಡೆ ತುಮಕೂರಿನ ಚುನಾವಣೆ ಕಡೆ ನೋಡುವಂತಾಗಿದೆ. ಮೋದಿ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳಾಗುತ್ತಾರೆ, ಮೋದಿ ಪರ ಮಾತನಾಡಿದರೆ ದೇಶಾಭಿಮಾನಿಗಳಾಗುತ್ತಾರೆ. ದೇಶದಲ್ಲಿ ಸುಳ್ಳಿನ ಸರಮಾಲೆ ನಿರ್ಮಾಣವಾಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಜಯಮಾಲ ಮಾತನಾಡಿ, ಐದು ವರ್ಷಗಳ ಹಿಂದೆ ನೀಡಿದ್ದ ಚುನಾವಣಾ ಪೂರ್ವ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿಲ್ಲ.

ದೇಶದ ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡಲಾಗುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದು ಗೊತ್ತಿದೆ. ಪ್ರಧಾನಿಯವರು ದೇಶದ ಮಹಿಳೆಯರ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ದೇವೇಗೌಡರು ಇಳಿವಯಸಿನಲ್ಲೂ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಮತದಾರರು ಆಶೀರ್ವಾದ ಮಾಡಬೇಕು ಎಂದರು. ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ವಕ್ತಾರ ರಮೇಶ್ ಬಾಬು, ಮಾಜಿ ಶಾಸಕ ಎಚ್.ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.