Sunday, January 19, 2025
ಸುದ್ದಿ

ಹಿಂದೂ ಸಮಾಜೋತ್ಸವ ಶೋಭಾಯಾತ್ರೆ | ಮುಸ್ಲಿಮರಿಂದ ತಂಪು ಪಾನೀಯ ವಿತರಣೆ

 

ಉಡುಪಿ : ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಸಂದರ್ಭ ಜಿಲ್ಲೆಯ ಮುಸ್ಲಿಂ ಸಮುದಾಯದ ವತಿಯಿಂದ ತಂಪುಪಾನೀಯ ವಿತರಿಸಲು ಸಿದ್ಧತೆ ನಡೆದಿದೆ. ಜೋಡುಕಟ್ಟೆಯಿಂದ ಮೆರವಣಿಗೆ ಹೊರಡಲಿದ್ದು ಅಲ್ಲಿಂದ ಸ್ವಲ್ಪ ಮುಂದಕ್ಕೆ ಕೋರ್ಟ್‌ ಸಂಕೀರ್ಣದ ಎದುರು

ಜಾಹೀರಾತು
ಜಾಹೀರಾತು
ಜಾಹೀರಾತು

ತಂಪು ಪಾನೀಯ ವಿತರಿಸಲಾಗುವುದು. ಈ ಹಿಂದೆ ಪೇಜಾವರ ಶ್ರೀಗಳ ಪರ್ಯಾಯ, ಪರ್ಕಳ ಮತ್ತು ಕಡಿಯಾಳಿಯ 50ನೇ ವರ್ಷದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿಯೂ ಇದೇ ರೀತಿ ತಂಪುಪಾನೀಯ ವಿತರಿಸಿದ್ದೇವೆ. ಇದು ನಮ್ಮ ಸ್ನೇಹ, ಸೌಹಾರ್ದದ ಸಂಕೇತ ಎಂದು ಪೇಜಾವರ ಬ್ಲಿಡ್‌ ಟೀಮ್‌ ಅಧ್ಯಕ್ಷ ಮಹಮ್ಮದ್‌ ಆರೀಫ್ ಮತ್ತು ಪ್ರ. ಕಾರ್ಯದರ್ಶಿ ಅನ್ಸಾರ್‌ ಅಹಮ್ಮದ್‌ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಸಂಘ ಸಂಸ್ಥೆಗಳು, ಮನೆಯವರು ಪಾನೀಯ ವ್ಯವಸ್ಥೆ ಮಾಡಿದ್ದಾರೆ. ಪರ್ಕಳದ ನಿವಾಸಿ ಅಲ್ವಿನ್‌ ಡಿ’ಸೋಜಾ ಅಡುಗೆ ಮನೆಯಲ್ಲಿ ಬಡಿಸುವ ಕೆಲಸದಲ್ಲಿ ತೊಡಗಿದ್ದರೆ, ವಿಐಪಿ ರಘುಪತಿ ಭಟ್‌ ಅವರು ಮೂರೂ ದಿನ ಅಡುಗೆ ಮನೆಯಲ್ಲಿ ಬಡಿಸುವ ಸ್ವಯಂಸೇವಕರೊಂದಿಗೆ ಸೇರಿಕೊಂಡು ಸಂತಸಂತರ್ಪಣೆಯ ಕೆಲಸ ನೋಡಿಕೊಳ್ಳುತ್ತಿದ್ದಾರೆ.

Leave a Response