ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಖರೀದಿಯಲ್ಲಿ ಹಗರಣ ಆಗಿದೆ ಎಂದು ದೆವ್ವ ಹಿಡಿದವರಂತೆ ಎಲ್ಲೆಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಥಿಂಕರ್ಸ್ ಆಯೋಜಿಸಿದ್ದ ಸಂವಾದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು, ಸಿಎಜಿ ವರದಿ, ಸದನದಲ್ಲಿ ಅಂಕಿ ಅಂಶ ಸಹಿತ ಉತ್ತರಿಸಿದ ಬಳಿಕವೂ ಕಾಂಗ್ರೆಸ್ ಆರೋಪ ಮುಂದುವರೆದಿದೆ.
ಯಾರೊಬ್ಬರಿಗೋ 30 ಸಾವಿರ ಕೋಟಿ ರೂ.ಗಳನ್ನು ಮೋದಿ ನೀಡಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಸಾಕ್ಷ್ಯ ನೀಡಲಿ, ರಫೇಲ್ ಗೂ ಮೊದಲು ಅಗಸ್ಟಾ ವೆಸ್ಟ್ ಲ್ಯಾಂಡ್, 2 ಜಿ ಹಗರಣ ಕುರಿತು ಮಾತನಾಡಲಿ ಎಂದರು. ರಫೇಲ್ ವಿಚಾರದಲ್ಲಿ ಕಾಂಗ್ರೆಸ್ ತಿಳಿದೋ, ತಿಳಿಯದೋ ಅಂತಾರಾಷ್ಟ್ರೀಯ ಕಾರ್ಪೋರೇಟ್ ಕಂಪನಿಯೊಂದರ ಕೈಗೊಂಬೆ ಆಗಿರುವಂತಿದೆ. ರಫೇಲ್ ಖರೀದಿ 2 ಸರ್ಕಾರಗಳ ನಡುವಿನ ಒಪ್ಪಂದವಾಗಿದ್ದು, ಪಾರದರ್ಶಕವಾಗಿ ನಡೆದಿದೆ. ಸೆಪ್ಟೆಂಬರ್ ಮೊದಲು ರಫೇಲ್ ಯುದ್ಧವಿಮಾನ ಬರಲಿದೆ ಎಂದು ಹೇಳಿದರು.