ಬೆಂಗಳೂರು ದಕ್ಷಿಣ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪರವಾಗಿ ಶಾಸಕ ಮಾನ್ಯ ಶಿವರಾಮ ಹೆಬ್ಬಾರ್‌ರಿಂದ ಹವ್ಯಕ ಮಹಾಸಭೆಯಲ್ಲಿ ಮತಯಾಚನೆ – ಕಹಳೆ ನ್ಯೂಸ್
ದಿನಾಂಕ 14.04.2019ರ ಭಾನುವಾರ ಬೆಳಗ್ಗೆ ಹವ್ಯಕ ಮಹಾಸಭೆಯ ಹವ್ಯಕ ಸದಸ್ಯರಿಗೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾನ್ಯ ಶ್ರೀ ಬಿ.ಕೆ. ಹರಿಪ್ರಸಾದ್ ರವರ ಪರವಾಗಿ ಯಲ್ಲಾಪುರ ಶಾಸಕರಾದ ಮಾನ್ಯ ಶ್ರೀ ಶಿವರಾಮ ಹೆಬ್ಬಾರ್ ಇವರು ಸಮಸ್ತ ಹವ್ಯಕ ಬಾಂಧವರು ತಮ್ಮ ಅಮೂಲ್ಯ ಮತವನ್ನು ನೀಡಬೇಕೆಂದು ವಿನಂತಿಸಿದರು ಹಾಗೂ ಪಡವಗೋಡು ಸೂರ್ಯನಾರಾಯಣ ಇವರೂ ಸಹಾ ಮತ ಕೇಳಿದರು. ಈ ಸಂದರ್ಭದಲ್ಲಿ ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಜೆ. ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತಕುಮಾರ ಭಟ್, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ನಿರ್ದೇಶಕರಾದ ನಿತಿನ್ ಶಾಸ್ತ್ರಿ, ಎಂ.ಎನ್. ಹೆಗಡೆ ಹಾರೂರಾರು, ಪ್ರಸನ್ನಕುಮಾರ ಕೆ.ಎಸ್, ಪ್ರಕಾಶ ಮಳಲಗದ್ದೆ ಹಾಗೂ ಇನ್ನಿತರ ಮಹಾಸಭೆಯ ಸದಸ್ಯರು ಭಾಗವಹಿಸಿದ್ದರು.