‘ಕಿರಿಕ್ ಪಾರ್ಟಿ’ ಚಿತ್ರಗಳ ನಂತರ ರಕ್ಷಿತ್ ಶೆಟ್ಟಿ ಎತ್ತ ಹೋದ್ರ ಅಂತ ಅಭಿಮಾನಿಗಳು ಕಾಯ್ತಾ ಇದ್ದರು, ಜೊತೆಗೆ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ಅನ್ನೊ ಮಾತು ಕೇಳಿ ಬರ್ತಾ ಇತ್ತು. ಆ ಎರಡು ಸಿನೆಮಾ ಅಂದರೆ ‘ಅವನೇ ಶ್ರೀಮನ್ನಾನಾರಾಯಣ’ ಹಾಗೂ ‘777 ಚಾರ್ಲಿ’. ಇದೀಗ ಬಹುತೇಕ ಈ ಎರಡು ಚಿತ್ರಗಳ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಾರ್ಲಿ 777 ಚಿತ್ರದ ಪೋಟೋವೊಂದು ವೈರಲ್ ಆಗಿದೆ. ಈಗಾಗಲೇ ಚಿತ್ರತಂಡ ಶೇಕಡ 70 ಭಾಗ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್‍ಗಳು ಬಿಡುಗಡೆಯಾಗಿ ಗಮನಸೆಳೆದಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತ್ ಮತ್ತು ನಾಯಿಯ ಪೋಟೋ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.
ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಿರಣ್ ರಾಜ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಪರಂವಾ ಸ್ಟುಡಿಯೋ’ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಇನ್ನೂ ಉಳಿದಂತೆ ‘777 ಚಾರ್ಲಿ’ ಸಿನಿಮಾದಲ್ಲಿ ನಾಯಕನ ಪಯಣ ಶ್ವಾನದೊಂದಿಗೆ ಸಾಗುತ್ತದೆ. ಇಡೀ ಚಿತ್ರವು ಕರ್ನಾಟಕದಿಂದ ಕಾಶ್ಮೀರದ ತನಕ ಸಾಗುವ ಪಯಣದಲ್ಲಿ ನಾಯಕನೊಂದಿಗೆ ಆ ಶ್ವಾನವೂ ಇರಲಿದೆ. ಇದರಿಂದ ಪ್ರಾಣಿ ಹಾಗೂ ಮನುಷ್ಯನ ಗಾಢ ಸಂಬಂಧಧ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದಾಗಿದೆ.